ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಸ್ಟೀಲ್: ಎಲ್ಲಿಂದ ಬೇಕಿದ್ದರೂ ಕೆಲಸ

Last Updated 2 ನವೆಂಬರ್ 2020, 17:00 IST
ಅಕ್ಷರ ಗಾತ್ರ

ನವದೆಹಲಿ: ವರ್ಷದ ಅಷ್ಟೂ ದಿನ ಮನೆಯಿಂದಲೇ ಕೆಲಸ ನಿರ್ವಹಿಸಲು, ದೇಶದ ಯಾವುದೇ ಸ್ಥಳದಿಂದ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸುವ ಹೊಸ ನೀತಿಯನ್ನು ಟಾಟಾ ಸ್ಟೀಲ್ ಸೋಮವಾರ ಪ್ರಕಟಿಸಿದೆ. ಹೊಸ ನೀತಿಯು ಭಾನುವಾರದಿಂದಲೇ ಅನುಷ್ಠಾನಕ್ಕೆ ಬಂದಿದೆ ಎಂದು ಕಂಪನಿ ಹೇಳಿದೆ.

‘ವಿಶ್ವಾಸ ಮತ್ತು ಫಲಿತಾಂಶವನ್ನು ಆಧರಿಸಿದ ಕೆಲಸದ ಸಂಸ್ಕೃತಿ’ಯ ಕಡೆ ಸಾಗುತ್ತಿರುವುದಾಗಿ ಕಂಪನಿ ಹೇಳಿದೆ. ಹೊಸ ನೀತಿಯ ಅನ್ವಯ, ನಿರ್ದಿಷ್ಟ ಸ್ಥಳದಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ಹೊಂದಿದ್ದ ಅಧಿಕಾರಿಗಳು ಕೂಡ ಇನ್ನು ಮನೆಯಿಂದಲೇ ಕೆಲಸ ಮಾಡಬಹುದು. ಅವರು ವರ್ಷದಲ್ಲಿ ಎಷ್ಟು ದಿನ ಬೇಕಿದ್ದರೂ ಮನೆಯಿಂದ ಕೆಲಸ ಮಾಡಬಹುದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಸಾಂಕ್ರಾಮಿಕದ ಪರಿಸ್ಥಿತಿ ತಿಳಿಗೊಂಡ ನಂತರ ಹೊಸ ನೀತಿಯು ಅಧಿಕಾರಿಗಳಿಗೆ ತಮ್ಮ ಇಷ್ಟದ ಊರಿಗೆ ಸ್ಥಳಾಂತರಗೊಳ್ಳುವ ಅವಕಾಶವನ್ನು ನೀಡಲಿದೆ. ಅವರು ದೇಶದ ಯಾವುದೇ ಸ್ಥಳದಿಂದಲಾದರೂ ಕೆಲಸ ನಿರ್ವಹಿಸಬಹುದು. ಈ ನೀತಿಯನ್ನು ಒಂದು ವರ್ಷದ ಅವಧಿಗೆ ಪರೀಕ್ಷಾರ್ಥವಾಗಿ ಚಾಲ್ತಿಯಲ್ಲಿ ಇರಿಸಲಾಗುವುದು. ನಂತರ ಇದು ಎಷ್ಟು ಪರಿಣಾಮಕಾರಿ ಎಂಬುದನ್ನು ಪರಿಶೀಲಿಸಲಾಗುವುದು.

ಬದಲಾವಣೆಗಳಿಗೆ ಹೊಂದಿಕೊಳ್ಳುವ ಹೊಸ ಕೆಲಸದ ಸಂಸ್ಕೃತಿಯು, ಹೊಸ ತಲೆಮಾರಿಗೆ ಅಗತ್ಯವಿರುವಂತಹ ಕೆಲಸದ ಸ್ಥಳವನ್ನು ಸೃಷ್ಟಿಸಬೇಕೆಂಬ ಸಂಸ್ಥೆಯ ಉದ್ದೇಶವನ್ನು ಹೇಳುತ್ತಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗದ ಉಪಾಧ್ಯಕ್ಷ ಸುರೇಶ್ ದತ್ ತ್ರಿಪಾಠಿ ಹೇಳಿದ್ದಾರೆ.

ಕಚೇರಿಯ ಆವರಣದಲ್ಲಿ ನಿರ್ದಿಷ್ಟ ಅವಧಿಗೆ ಕೆಲಸ ಮಾಡಿದರೆ ಮಾತ್ರ ಉತ್ಪಾದಕತೆ ಹೆಚ್ಚಿರುತ್ತದೆ ಎಂಬ ಸಾಂಪ್ರದಾಯಿಕ ಆಲೋಚನೆಯಿಂದ ದೂರ ಸರಿಯಲು ಕೋವಿಡ್–19 ಸಾಂಕ್ರಾಮಿಕವು ನೆರವಾಗಿದೆ. ಬೇರೆ ಬೇರೆ ಸ್ಥಳಗಳಿಂದ ಕೆಲಸ ಮಾಡುವ ವಿಚಾರವಾಗಿ ಇದ್ದ ಕೆಲವು ಅಪನಂಬಿಕೆಗಳನ್ನು ದೂರ ಮಾಡಿದೆ ಎಂದು ಅವರು ಹೇಳಿದ್ದಾರೆ.

ಹೊಸ ಕೆಲಸದ ನೀತಿಯು ವೈಯಕ್ತಿಕ ಜೀವನ ಹಾಗೂ ಕಚೇರಿ ಕೆಲಸದ ನಡುವೆ ಒಳ್ಳೆಯ ಸಮತೋಲನ ಸಾಧಿಸಲು ನೆರವಾಗುತ್ತದೆ. ಎಲ್ಲಿ ನೆಲೆ ನಿಲ್ಲಬೇಕು ಎಂಬ ವಿಚಾರದಲ್ಲಿ ಮುಕ್ತವಾಗಿ ತೀರ್ಮಾನ ಕೈಗೊಳ್ಳಲು ಸಹಾಯ ಮಾಡುತ್ತದೆ ಎಂದೂ ತ್ರಿಪಾಠಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT