ಸೋಮವಾರ, ಸೆಪ್ಟೆಂಬರ್ 20, 2021
30 °C

₹ 13 ಲಕ್ಷ ಕೋಟಿ ದಾಟಿದ ಟಿಸಿಎಸ್‌ ಮಾರುಕಟ್ಟೆ ಮೌಲ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಕಂಪನಿಯ ಮಾರುಕಟ್ಟೆ ಮೌಲ್ಯವು ಮಂಗಳವಾರದ ವಹಿವಾಟಿನಲ್ಲಿ ₹ 13 ಲಕ್ಷ ಕೋಟಿ ದಾಟಿದ ಮೈಲಿಗಲ್ಲು ಸೃಷ್ಟಿಸಿತು. ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್ ಬಳಿಕ ಈ ಸಾಧನೆ ಮಾಡಿದ ದೇಶದ ಎರಡನೇ ಕಂಪನಿ ಇದಾಗಿದೆ.

ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ದಿನದ ವಹಿವಾಟಿನ ಅಂತ್ಯದ ವೇಳೆಗೆ ಟಿಸಿಎಸ್‌ ಮಾರುಕಟ್ಟೆ ಮೌಲ್ಯವು ₹ 13.14 ಲಕ್ಷ ಕೋಟಿಗಳಷ್ಟಾಗಿದೆ. ಕಂಪನಿಯ ಷೇರು ಮೌಲ್ಯವು ಶೇಕಡ 2.32ರಷ್ಟು ಏರಿಕೆ ಆಗಿ ಪ್ರತಿ ಷೇರಿನ ಬೆಲೆ ₹ 3,552.40ಕ್ಕೆ ತಲುಪಿದ್ದರಿಂದ ಕಂಪನಿಯು ಈ ಮೈಲಿಗಲ್ಲು ಸಾಧಿಸುವಂತಾಯಿತು. ಜನವರಿಯಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 12 ಲಕ್ಷ ಕೋಟಿಯನ್ನು ದಾಟಿತ್ತು.

ಸದ್ಯ ₹ 13.71 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದುವ ಮೂಲಕ ರಿಲಯನ್ಸ್‌ ಇಂಡಸ್ಟ್ರೀಸ್ ದೇಶದ ಅತ್ಯಂತ ಮೌಲ್ಯಯುತ ಕಂಪನಿ ಆಗಿದೆ.

ಸೂಚ್ಯಂಕ ಏರಿಕೆ: ದಿನದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 210 ಅಂಶ ಏರಿಕೆ ಕಂಡು 55,792 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಎನ್‌ಎಸ್‌ಇ ನಿಫ್ಟಿ 51 ಅಂಶ ಹೆಚ್ಚಾಗಿ 16,614 ಅಂಶಗಳಿಗೆ ತಲುಪಿದೆ.

ಐ.ಟಿ., ಎಫ್‌ಎಂಸಿಜಿ ಮತ್ತು ಫಾರ್ಮಾ ವಲಯದ ಷೇರುಗಳು ಉತ್ತಮ ವಹಿವಾಟು ನಡೆಸಿದ್ದರಿಂದ ಸತತ ನಾಲ್ಕನೇ ದಿನವೂ ಷೇರುಪೇಟೆಗಳು ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿದವು ಎಂದು ತಜ್ಞರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು