ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಹಂತದ ಕೊರೊನಾ ಸೋಂಕು ಹರಡುವ ಆತಂಕ: 10ಗ್ರಾಂ ಚಿನ್ನದ ಬೆಲೆ ₹ 380 ಇಳಿಕೆ

Last Updated 15 ಜೂನ್ 2020, 14:09 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಸೋಮವಾರ 10 ಗ್ರಾಂಗೆ ₹ 380ರಂತೆ ಇಳಿಕೆಯಾಗಿ ₹ 47,900ಕ್ಕೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ 10ಗ್ರಾಂಗೆ ₹ 48,280ರಂತೆ ವಹಿವಾಟು ಅಂತ್ಯಗೊಂಡಿತ್ತು.

ಬೆಳ್ಳಿ ಬೆಲೆಯೂ ಕೆ.ಜಿಗೆ ₹ 590ರಂತೆ ಇಳಿಕೆಯಾಗಿ ₹48,790 ರಿಂದ ₹ 48,200ಕ್ಕೆ ಇಳಿಕೆಯಾಗಿದೆ.

‘ಜಗತ್ತಿನಾದ್ಯಂತ ಎರಡನೇ ಹಂತದ ಕೊರೊನಾ ವೈರಸ್‌ ಸೋಂಕು ಹರಡುವ ಆತಂಕ ಮೂಡಿದೆ. ಇದರಿಂದಾಗಿ ಸೂಚ್ಯಂಕದ ಜತೆಗೆ ಚಿನ್ನದ ಬೆಲೆಯೂ ಇಳಿಕೆ ಕಂಡಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್‌ ಪಟೇಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT