ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಷೇರುಪೇಟೆಯಲ್ಲಿ ಎಲ್ಐಸಿ ಷೇರುಗಳ ವಹಿವಾಟು ಆರಂಭ

ಅಕ್ಷರ ಗಾತ್ರ

ಮುಂಬೈ: ಭಾರತೀಯ ಜೀವ ವಿಮಾ ನಿಗಮದ(ಎಲ್‌ಐಸಿ) ಷೇರುಗಳು ಇಂದಿನಿಂದ(ಮಂಗಳವಾರ) ದೇಶೀಯ ಷೇರು ಮಾರುಕಟ್ಟೆಗಳಲ್ಲಿ ವಹಿವಾಟು ಆರಂಭಿಸಿವೆ. ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳ ಬೆಲೆ ಕುಸಿತ ದಾಖಲಿಸಿದೆ.

ಎಲ್‌ಐಸಿಯ ಪ್ರತಿ ಷೇರಿನ ಬೆಲೆಯನ್ನು ₹949ಕ್ಕೆ ನಿಗದಿ ಮಾಡಲಾಗಿತ್ತು. ಎಲ್‌ಐಸಿ ಪಾಲಿಸಿದಾರರು ಹಾಗೂ ಸಣ್ಣ ಹೂಡಿಕೆದಾರರಿಗೆ ಸರ್ಕಾರ ರಿಯಾಯಿತಿ ನೀಡಿರುವುದರಿಂದ ಪ್ರತಿ ಷೇರು ಕ್ರಮವಾಗಿ ₹889ಕ್ಕೆ ಮತ್ತು ₹904ಕ್ಕೆ ಸಿಕ್ಕಿವೆ.

ಎಲ್‌ಐಸಿಯ ಐಪಿಒ ಮೇ 9 ರಂದು ಮುಕ್ತಾಯಗೊಂಡಿತ್ತು. ಮೇ 12 ರಂದು ಬಿಡ್‌ದಾರರಿಗೆ ಷೇರುಗಳನ್ನು ಹಂಚಿಕೆ ಮಾಡಲಾಗಿತ್ತು. ಸರ್ಕಾರವು ಐಪಿಒ ಮೂಲಕ 22.13 ಕೋಟಿ ಷೇರುಗಳನ್ನು ಅಥವಾ ಎಲ್‌ಐಸಿಯಲ್ಲಿ 3.5 ಶೇಕಡಾ ಪಾಲನ್ನು ಮಾರಾಟ ಮಾಡಿದೆ.

ಎಲ್‌ಐಸಿ ಐಪಿಒ ಈವರೆಗಿನ ದೇಶದ ಅತಿದೊಡ್ಡ ಐಪಿಒ ಆಗಿದೆ. 2021ರಲ್ಲಿ ಬಂದ ₹18,300 ಕೋಟಿ ಗಳಷ್ಟಿದ್ದ ಪೇಟಿಎಂ ಐಪಿಒ ಈವರೆಗಿನ ಗರಿಷ್ಠವಾಗಿತ್ತು. ಕೋಲ್ ಇಂಡಿಯಾ (2010) ಸುಮಾರು 15,500 ಕೋಟಿ ಮತ್ತು ರಿಲಯನ್ಸ್ ಪವರ್ (2008) ₹11,700 ಕೋಟಿ ಬೆಲೆಯ ಷೇರುಗಳನ್ನು ಮಾರಾಟ ಮಾಡಿದ್ದವು.

ಅಸ್ಥಿರ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಎಲ್ಐಸಿ ಕಳೆದ ತಿಂಗಳು ತನ್ನ ಐಪಿಒ ಗಾತ್ರವನ್ನು ಶೇಕಡ 5 ರಿಂದ ಶೇಕಡ 3.5 ಕ್ಕೆ ಇಳಿಸಿತ್ತು. ₹ 20,557 ಕೋಟಿಗಳಷ್ಟು ಕಡಿಮೆಯಾದ ನಂತರವೂ ಎಲ್‌ಐಸಿ ಐಪಿಒ ದೇಶದಲ್ಲೇ ಅತ್ಯಂತ ದೊಡ್ಡ ಐಪಿಒ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT