ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಕಂಪನಿ ಖರೀದಿ ಬೆನ್ನಲ್ಲೇ ಟೆಸ್ಲಾ ಮಾರುಕಟ್ಟೆ ಮೌಲ್ಯ ಕುಸಿತ

Last Updated 27 ಏಪ್ರಿಲ್ 2022, 16:27 IST
ಅಕ್ಷರ ಗಾತ್ರ

ರಾಯಿಟರ್ಸ್: ಟ್ವಿಟರ್ ಕಂಪನಿಯನ್ನು ಖರೀದಿಸಲು ಎಲಾನ್ ಮಸ್ಕ್ ಅವರು ಟೆಸ್ಲಾ ಕಂಪನಿಯಲ್ಲಿ ತಾವು ಹೊಂದಿರುವ ಷೇರುಗಳನ್ನು ಮಾರಬೇಕಾಗಬಹುದು ಎಂಬ ಕಳವಳ ಹೂಡಿಕೆದಾರರಲ್ಲಿ ಮೂಡಿದ ಪರಿಣಾಮವಾಗಿ, ಟೆಸ್ಲಾ ಮಾರುಕಟ್ಟೆ ಮೌಲ್ಯವು ಮಂಗಳವಾರ ₹ 9.64 ಲಕ್ಷ ಕೋಟಿಯಷ್ಟು ಕುಸಿದಿದೆ.

ಟ್ವಿಟರ್ ಖರೀದಿ ವಹಿವಾಟಿನಲ್ಲಿ ಟೆಸ್ಲಾ ಪಾಲು ಇಲ್ಲ. ಆದರೆ, ಟ್ವಿಟರ್ ಖರೀದಿಗೆ ಹಣ ತರುವುದು ಎಲ್ಲಿಂದ ಎಂಬುದನ್ನು ಬಹಿರಂಗಪಡಿಸಲು ಎಲಾನ್ ಮಸ್ಕ್ ಅವರು ನಿರಾಕರಿಸಿದ್ದಾರೆ. ಇದರಿಂದಾಗಿ, ಟೆಸ್ಲಾ ಷೇರುಗಳ ಮೌಲ್ಯದ ಮೇಲೆ ಪರಿಣಾಮ ಉಂಟಾಗಿದೆ.

ಟೆಸ್ಲಾ ಷೇರು ಮೌಲ್ಯದಲ್ಲಿ ಮಂಗಳವಾರ ಆಗಿರುವ ಶೇ 12.2ರಷ್ಟು ಇಳಿಕೆಯ ಕಾರಣದಿಂದಾಗಿ, ಮಸ್ಕ್ ಅವರು ಟೆಸ್ಲಾದಲ್ಲಿ ಹೊಂದಿರುವ ಷೇರುಗಳ ಮೌಲ್ಯವು ₹ 1.60 ಲಕ್ಷ ಕೋಟಿಯಷ್ಟು ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT