ಸೋಮವಾರ, ಜೂನ್ 14, 2021
22 °C

ಉತ್ತಮ ಸ್ಥಿತಿಯಲ್ಲಿ ದಿ. ಬೆಂಗಳೂರು ಸಿಟಿ ಕೋ–ಅಪರೇಟಿವ್‌ ಬ್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದಿ. ಬೆಂಗಳೂರು ಸಿಟಿ ಕೋ–ಆಪರೇಟಿವ್‌ ಬ್ಯಾಂಕ್ ಲಿಮಿಟೆಡ್‌’ನ ವ್ಯವಹಾರವು 2020–21ನೇ ಹಣಕಾಸು ವರ್ಷದ ಆರಂಭದಲ್ಲಿ ₹ 3,714 ಕೋಟಿ ಇತ್ತು. ಇದು ಹಣಕಾಸು ವರ್ಷದ ಅಂತ್ಯದ ವೇಳೆಗೆ ₹ 3,800 ಕೋಟಿಗೆ, ಅಂದರೆ ಶೇಕಡ 4.99ರಷ್ಟು, ಏರಿದೆ ಎಂದು ಪ್ರಕಟಣೆ ತಿಳಿಸಿದೆ.

ಆದಾಯ ತೆರಿಗೆ ಪಾವತಿಗೂ ಮುನ್ನ ಬ್ಯಾಂಕ್‌ ₹ 81.23 ಕೋಟಿ ಲಾಭ ಗಳಿಸಿದೆ. ಆದಾಯ ತೆರಿಗೆ ಪಾವತಿಯ ಬಳಿಕ ಲಾಭವು ₹ 26.11 ಕೋಟಿಗಳಷ್ಟಾಗಿದೆ. ಬ್ಯಾಂಕ್‌ನ ನಿವ್ವಳ ಅನುತ್ಪಾದಕ ಆಸ್ತಿಗಳು ಶೇ 0.52ರಷ್ಟು ಕಡಿಮೆ ಆಗಿದ್ದು ಶೇ 3.38ಕ್ಕೆ ತಲುಪಿದೆ.

ಬ್ಯಾಂಕ್‌ನ ಷೇರು ಬಂಡವಾಳ ಮತ್ತು ಸ್ವಂತ ನಿಧಿಗಳು ಶೇ 20.39ರಷ್ಟು ಹೆಚ್ಚಾಗಿ ₹ 351.56 ಕೋಟಿಗೆ ಏರಿಕೆಯಾಗಿವೆ. ಬ್ಯಾಂಕ್‌ನ ಒಟ್ಟಾರೆ ದುಡಿಯುವ ಬಂಡವಾಳವೂ ಶೇ 7.84ರಷ್ಟು ಬೆಳವಣಿಗೆ ಕಂಡಿದ್ದು ₹ 2,652.93 ಕೋಟಿಗಳಷ್ಟಾಗಿದೆ ಎಂದು ಅದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು