ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 6ರಂದು ಇಂಡೆಜಿನ್‌ ಐಪಿಒ ಆರಂಭ

Published 2 ಮೇ 2024, 16:45 IST
Last Updated 2 ಮೇ 2024, 16:45 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ವಲಯದ ಇಂಡೆಜಿನ್‌ ಲಿಮಿಟೆಡ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಕ್ರಿಯೆಯು ಇದೇ 6ರಂದು ಆರಂಭವಾಗಲಿದೆ. 

₹2 ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ₹430ರಿಂದ ₹452ರಂತೆ ಬೆಲೆ ನಿಗದಿಪಡಿಸಿದೆ. ಆ್ಯಂಕರ್‌ ಹೂಡಿಕೆಯು 3ರಂದು ಇರಲಿದೆ. ಬಿಡ್ 6ರಂದು  ಆರಂಭವಾಗಿ, 8ರಂದು ಮುಕ್ತಾಯಗೊಳ್ಳಲಿದೆ. ಹೂಡಿಕೆದಾರರು ಕನಿಷ್ಠ 33 ಈಕ್ವಿಟಿ ಷೇರುಗಳಿಗೆ ಬಿಡ್‌ ಮಾಡಬೇಕಿದೆ. ಒಟ್ಟು 2.39 ಕೋಟಿ ಷೇರುಗಳಿಗೆ ಬಿಡ್‌ ಇರಲಿದೆ ಎಂದು ಕಂಪನಿಯ ಅಧ್ಯಕ್ಷ, ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನೀಶ್‌ ಗುಪ್ತಾ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  

ಅರ್ಹ ಉದ್ಯೋಗಿಗಳ ಚಂದಾದಾರಿಕೆಯನ್ನು (ಉದ್ಯೋಗಿಗಳ ಮೀಸಲಾತಿ ಪಾಲು) ಇನ್ನು ಮುಂದೆ ನಿವ್ವಳ ಕೊಡುಗೆ ಎಂದು ಕರೆಯಲಾಗುತ್ತದೆ. ಬಿಡ್‌ ಮಾಡುವ ಅರ್ಹ ಉದ್ಯೋಗಿಗೆ ಪ್ರತಿ ಈಕ್ವಿಟಿ ಷೇರಿಗೆ ₹30ರಂತೆ ರಿಯಾಯಿತಿ ನೀಡಲಾಗುವುದು ಎಂದರು. 

ಈ ಐಪಿಒದಿಂದ ಸಂಗ್ರಹವಾಗುವ ಮೊತ್ತವನ್ನು ಕಂಪನಿಯು ತನ್ನ ಅಂಗಸಂಸ್ಥೆಯಾಗಿರುವ ಐಎಲ್‌ಎಸ್‌ಎಲ್‌ ಹೋಲ್ಡಿಂಗ್ಸ್‌ ಇಂಕ್‌, ಕಂಪನಿಯ ಹಾಗೂ ಅಂಗ ಸಂಸ್ಥೆಯಾಗಿರುವ ಇಂಡೆಜಿನ್‌ದ ಬಂಡವಾಳ ವೆಚ್ಚದ ಅಗತ್ಯಗಳಿಗೆ ಹಣಕಾಸು ನೆರವು ಒದಗಿಸಲು ಬಳಸುತ್ತದೆ. ಜೊತೆಗೆ ಕಾರ್ಪೊರೇಟ್‌ ಉದ್ದೇಶ, ವಹಿವಾಟು ವಿಸ್ತರಣೆ, ಸ್ವಾಧೀನ ಮತ್ತಿತರ ಉದ್ದೇಶಗಳಿಗೆ ಬಳಸಿಕೊಳ್ಳಲಿದೆ ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ಕಂಪನಿಯ 17 ಕಚೇರಿಗಳಿದ್ದು, ಬೆಂಗಳೂರು ಮತ್ತು ಮುಂಬೈನಲ್ಲೂ ಕಚೇರಿಗಳನ್ನು ಹೊಂದಿದೆ. ಕಂಪನಿಯು 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಂಪನಿಯ ಅಧಿಕಾರಿಗಳಾದ ವಿಶಾಲ್‌ ಕಂಜಾನಿ, ಡಾ.ಸಂಜಯ್‌ ಸುರೇಶ್‌ ಪರಿಕ್‌ ಮತ್ತು ಸುಹಾಸ್‌ ಪ್ರಭು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT