ಶನಿವಾರ, ಸೆಪ್ಟೆಂಬರ್ 25, 2021
24 °C

ವರಮಹಾಲಕ್ಷ್ಮಿ ಹಬ್ಬಕ್ಕೆ ತನೀರಾದಿಂದ ವಿಶೇಷ ಸೀರೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರಕುಶಲ ಜವಳಿ ಬ್ರ್ಯಾಂಡ್ ಆಗಿರುವ ತನೀರಾ, ವರಮಹಾಲಕ್ಷ್ಮಿ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಲು, ಕೈಯಿಂದ ನೇಯ್ದಿರುವ ಮೃದುವಾದ ರೇಷ್ಮೆ ಸೀರೆಗಳನ್ನು ಬಿಡುಗಡೆ ಮಾಡಿದೆ.

‘ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಸಾಫ್ಟ್ ಸಿಲ್ಕ್, ಸಿಲ್ಕ್ ಕಾಟನ್ ಮತ್ತು ಹೆವಿ ಸಿಲ್ಕ್‌ನಂತಹ ಶುದ್ಧ ಮತ್ತು ನೈಸರ್ಗಿಕ ಬಟ್ಟೆಗಳಿಂದ ಸಿದ್ಧಗೊಳಿಸಲಾದ ಸೀರೆಗಳನ್ನು ಗ್ರಾಹಕರಿಗೆ ನೀಡಲು ಸಂತೋಷ ಆಗುತ್ತಿದೆ’ ಎಂದು ತನೀರಾ ಬ್ರ್ಯಾಂಡ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಘುವರ್‌ ಸೇಠ್ ಹೇಳಿದ್ದಾರೆ.

ಈ ಸೀರೆಗಳ ಬೆಲೆಯು ₹ 5 ಸಾವಿರದಿಂದ ₹ 35 ಸಾವಿರದವರೆಗಿದೆ. ಬೆಂಗಳೂರಿನಲ್ಲಿ ಜಯನಗರ, ಇಂದಿರಾನಗರ, ಕಮರ್ಷಿಯಲ್‌ ಸ್ಟ್ರೀಟ್‌, ಓರಿಯನ್‌ ಮಾಲ್‌ನಲ್ಲಿ ಇರುವ ಮಳಿಗೆಗಳಲ್ಲಿ ಖರೀದಿಸಬಹುದಾಗಿದೆ. ಅಲ್ಲದೆ www.taneira.comನಲ್ಲಿಯೂ ಖರೀದಿಸಬಹುದಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಎಂಡ್‌ ಆಫ್‌ ಸೀಸನ್‌ ಸೇಲ್‌ನಲ್ಲಿ ಸೆಪ್ಟೆಂಬರ್‌ 12ರವರೆಗೆ ಸೀರೆಗಳ ವಿವಿಧ ಸಂಗ್ರಹಗಳ ಮೇಲೆ ಶೇಕಡ 30ರವರೆಗೂ ರಿಯಾಯಿತಿ ಪಡೆಯಬಹುದು ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು