ಭಾನುವಾರ, ನವೆಂಬರ್ 1, 2020
19 °C

ಥಾಮ್ಸನ್‌ನಿಂದ ವಿಶೇಷ ಕೊಡುಗೆ; ಸ್ಮಾರ್ಟ್‌ ಟಿವಿಗೆ ₹10,999

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೈಗೆಟುಕುವ ದರದಲ್ಲಿ ಮಾರಾಟ ಮಾಡಲಾಗುತ್ತಿರುವ ಥಾಮ್ಸನ್‌ ಬ್ರ್ಯಾಂಡ್‌ನ ಟಿವಿಗಳು ಫ್ಲಿಪ್‌ಕಾರ್ಟ್‌ನ 'ಬಿಗ್‌ ಬಿಲಿಯನ್‌ ಡೇಸ್‌'ನಲ್ಲಿ ಮತ್ತಷ್ಟು ಕೊಡುಗೆಗಳೊಂದಿಗೆ ಬರಲಿದೆ. ಥಾಮ್ಸನ್‌ ಟಿವಿಗಳ ಆರಂಭಿಕ ಬೆಲೆ ₹5,999 ಇದೆ.

'ಬಿಗ್‌ ಸೇವ್‌ ಆನ್‌ ಬಿಗರ್ ಟಿವಿ ಆಫರ್‌' ಹಬ್ಬದ ಕೊಡುಗೆಯಲ್ಲಿ 2 ಲಕ್ಷ ಟಿವಿಗಳನ್ನು ಮಾರಾಟ ಮಾಡುವ ಗುರಿ ಹೊಂದಿರುವುದಾಗಿ ಥಾಮ್ಸನ್‌ ಟಿವಿಗಳನ್ನು ಭಾರತದಲ್ಲಿ ತಯಾರಿಸುತ್ತಿರುವ ಎಸ್‌ಪಿಪಿಎಲ್‌ ಹೇಳಿದೆ. ಅಕ್ಟೋಬರ್‌ 16ರಿಂದ 21ರ ವರೆಗೂ ವಿಶೇಷ ಮಾರಾಟ ನಡೆಯಲಿದೆ.

₹10,999ರಿಂದ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ ಟಿವಿಗಳ ಬೆಲೆಗಳು ಸಿಗಲಿವೆ. ಇದರೊಂದಿಗೆ ಥಾಮ್ಸನ್‌ ವಾಶಿಂಗ್‌ ಮೆಷಿನ್‌ ಸಹ ಮಾರಾಟವಾಗಲಿದ್ದು, 6.5ಕೆ.ಜಿ. ಸಾಮರ್ಥ್ಯದ ವಾಶಿಂಗ್‌ ಮೆಷಿನ್‌ಗೆ ₹6,499 ನಿಗದಿಯಾಗಿದೆ. ರಿಯಾಯಿತಿ ದರದಲ್ಲಿ ಉತ್ತಮ ಪ್ರಾಡಕ್ಟ್‌ಗಳನ್ನು ನೀಡುತ್ತಿರುವುದಾಗಿ ಕಂಪನಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು