ಬೆಂಗಳೂರು: ಭಾರತದ ಕಾರು ತಯಾರಿಕಾ ಕಂಪನಿಗಳ ಪೈಕಿ ಮೂರು ಪ್ರಮುಖ ಕಂಪನಿಗಳ ವಾಹನ ಮಾರಾಟ ಪ್ರಮಾಣವು ಜೂನ್ ತಿಂಗಳಲ್ಲಿ ಇಳಿಕೆಯಾಗಿದೆ. ನಗರ ಪ್ರದೇಶಗಳ ಗ್ರಾಹಕರು ಕಾರು ಖರೀದಿಗೆ ಹಿಂದೇಟು ಹಾಕಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಮಾರುತಿ ಸುಜುಕಿ, ಟಾಟಾ ಮೋಟರ್ಸ್ ಮತ್ತು ಹುಂಡೈ ಇಂಡಿಯಾ ಕಂಪನಿಗಳ ವಾಹನ ಮಾರಾಟ ಪ್ರಮಾಣವು ಕ್ರಮವಾಗಿ ಶೇ 13, 15 ಮತ್ತು 12ರಷ್ಟು ಇಳಿಕೆ ಆಗಿದೆ. ಈ ಮೂರು ಕಂಪನಿಗಳು ಭಾರತದ ಕಾರು ಮಾರುಕಟ್ಟೆಯಲ್ಲಿ ಸರಿಸುಮಾರು ಶೇ 60ರಷ್ಟು ಪಾಲು ಹೊಂದಿವೆ.

ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟ ಪ್ರಮಾಣವು ಜೂನ್ನಲ್ಲಿ, 2023ರ ಡಿಸೆಂಬರ್ ನಂತರದ ಕನಿಷ್ಠ ಪ್ರಮಾಣಕ್ಕೆ ತಲುಪಿದೆ. ಮಾರುತಿ ಸುಜುಕಿ ಕಂಪನಿಯ ಸಣ್ಣ ಕಾರುಗಳ ಮಾರಾಟ ಪ್ರಮಾಣ ಕಡಿಮೆ ಆಗಿದೆ.

‘ಹಿಂದೊಂದು ಕಾಲದಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದ್ದ ಸಣ್ಣ ಕಾರುಗಳ ಮಾರಾಟ ಹೆಚ್ಚಳ ಕಾಣುತ್ತಿಲ್ಲ’ ಎಂದು ಮಾರುತಿ ಸುಜುಕಿ ಕಂಪನಿಯ ಹಿರಿಯ ಅಧಿಕಾರಿ ರಾಹುಲ್ ಭಾರ್ತಿ ಹೇಳಿದ್ದಾರೆ. ಕಂಪನಿಯ ಎಸ್ಯುವಿ ವಾಹನಗಳ ಮಾರಾಟದಲ್ಲಿಯೂ ಇಳಿಕೆ ಕಂಡುಬಂದಿದೆ.

‘ಬೇಡಿಕೆಯು ಮುಂದೆ ಹಂತ ಹಂತವಾಗಿ ಹೆಚ್ಚಳ ಕಾಣಲಿದೆ ಎಂಬ ಆಶಾವಾದ ಕಂಪನಿಗೆ ಇದೆ’ ಎಂದು ಹುಂಡೈ ಇಂಡಿಯಾ ಕಂಪನಿಯ ಸಿಒಒ ತರುಣ್ ಗರ್ಗ್ ಹೇಳಿದ್ದಾರೆ.

ಹೊಸದಾಗಿ ಬಿಡುಗಡೆ ಆಗಿರುವ ವಾಹನಗಳು ಮಾರಾಟ ಹೆಚ್ಚಳಕ್ಕೆ ನೆರವಾಗಬಹುದು ಎಂಬ ಭರವಸೆ ಟಾಟಾ ಮೋಟರ್ಸ್ಗೆ ಕೂಡ ಇದೆ. ಆದರೆ ಕಾರು ಉದ್ಯಮದ ಬೆಳವಣಿಗೆ ದರವು ಕಡಿಮೆ ಪ್ರಮಾಣದಲ್ಲಿಯೇ ಇರುವ ಅಂದಾಜು ತಜ್ಞರಲ್ಲಿದೆ.

2026ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಕಾರು ಮಾರಾಟ ಪ್ರಮಾಣವು ಶೇ 1ರಷ್ಟು ಮಾತ್ರ ಬೆಳವಣಿಗೆ ಕಾಣಬಹುದು ಎಂದು ಉದ್ಯಮದ ಪ್ರತಿನಿಧಿಗಳು ಅಂದಾಜಿಸಿದ್ದಾರೆ. ಕಳೆದ ವರ್ಷದಲ್ಲಿ ಕಾರು ಮಾರಾಟ ಪ್ರಮಾಣವು ಶೇ 2ರಷ್ಟು ಬೆಳವಣಿಗೆ ಕಂಡಿತ್ತು.

ಆದರೆ, ಪ್ರಮುಖ ಕಾರು ತಯಾರಿಕಾ ಕಂಪನಿಯಾದ ಮಹೀಂದ್ರ ಆ್ಯಂಡ್ ಮಹೀಂದ್ರ ಎಸ್ಯುವಿ ಮಾರಾಟ ಪ್ರಮಾಣ ಶೇ 18ರಷ್ಟು ಹೆಚ್ಚಳ ಕಂಡಿದೆ ಎಂದು ತಿಳಿಸಿದೆ. ಈ ಬೆಳವಣಿಗೆಯ ಕಾರಣದಿಂದಾಗಿ ಮಹೀಂದ್ರ ಕಂಪನಿಯು ದೇಶದ ಕಾರು ಮಾರುಕಟ್ಟೆಯಲ್ಲಿ ಎರಡನೆಯ ಸ್ಥಾನಕ್ಕೆ ಬಂದಿದೆ. ಈ ಸ್ಥಾನದಲ್ಲಿ ಹುಂಡೈ ಇಂಡಿಯಾ ಕಂಪನಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.