ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಸಾಲಗಳ ಒಟ್ಟು ಮೊತ್ತವು ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯಕ್ಕೆ ₹ 147.19 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಜೂನ್ ತ್ರೈಮಾಸಿಕದ ಕೊನೆಯಲ್ಲಿ ₹ 145.72 ಲಕ್ಷ ಕೋಟಿಯಷ್ಟು ಇತ್ತು.

ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಸೆಪ್ಟೆಂಬರ್ ತ್ರೈಮಾಸಿಕದ ಕೊನೆಯಲ್ಲಿ ಆಗಿರುವ ಸಾಲದ ಹೆಚ್ಚಳವು ಶೇಕಡ 1ರಷ್ಟು ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ಹೇಳಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ಸಾಲಪತ್ರಗಳ ಮೂಲಕ ಒಟ್ಟು ₹ 4.06 ಲಕ್ಷ ಕೋಟಿ ಸಂಗ್ರಹಿಸಿದೆ. ಇದೇ ಅವಧಿಯಲ್ಲಿ ಸಾಲ ಮರುಪಾವತಿಗೆ ₹ 92 ಸಾವಿರ ಕೋಟಿ ವಿನಿಯೋಗಿಸಿದೆ.

2021ರ ಸೆಪ್ಟೆಂಬರ್ 24ರಂದು ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು 638.64 ಬಿಲಿಯನ್ ಡಾಲರ್ (₹ 52.95 ಲಕ್ಷ ಕೋಟಿ) ಇತ್ತು. ಆದರೆ ಅದು ಈ ವರ್ಷದ ಸೆಪ್ಟೆಂಬರ್ 30ಕ್ಕೆ 532.66 ಬಿಲಿಯನ್ ಡಾಲರ್‌ಗೆ (₹ 44.16 ಲಕ್ಷ ಕೋಟಿ) ಇಳಿಕೆಯಾಗಿದೆ.

ಈ ವರ್ಷದ ಜುಲೈ 1ರಿಂದ ಸೆಪ್ಟೆಂಬರ್ 30ರ ನಡುವಿನ ಅವಧಿಯಲ್ಲಿ ರೂಪಾಯಿ ಮೌಲ್ಯವು ಶೇ 3.11ರಷ್ಟು ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.