ಶನಿವಾರ, ಜುಲೈ 31, 2021
27 °C

ಗ್ಲಾನ್ಸಾ, ಯಾರೀಸ್‌ ಮೇಲೆ ಶೇ 55ರಷ್ಟ ಬೈಬ್ಯಾಕ್‌: ಟೊಯೋಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟೊಯೋಟ ಕಿರ್ಲೋಸ್ಕರ್ ಮೋಟರ್‌ (ಟಿಕೆಎಂ) ಕಂಪನಿಯು ಗ್ರಾಹಕರಿಗೆ ವಿಶೇಷ ಹಣಕಾಸು ಕೊಡುಗೆಗಳನ್ನು ಘೋಷಿಸಿದೆ.

ಯಾರೀಸ್‌ ಮತ್ತು ಗ್ಲಾನ್ಸಾ ಮಾದರಿಗಳ ಮೇಲೆ ಶೇ 55ರಷ್ಟು ಮರು ಖರೀದಿ (ಬೈಬ್ಯಾಕ್‌) ಯೋಜನೆಯನ್ನೂ ನೀಡಲಿದೆ.

ಗ್ರಾಹಕರಿಗೆ ಕಾರು ಖರೀದಿ ನಿರ್ಧಾರವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಈ ವಿಶೇಷ ಪ್ರಯೋಜನಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.

‘ಗ್ರಾಹಕರು ಮೊದಲು ಎನ್ನುವ ತತ್ವವನ್ನು ನಾವು ಬಲವಾಗಿ ನಂಬಿದ್ದೇವೆ. ನಮ್ಮ ಗ್ರಾಹಕರ ನಿರೀಕ್ಷೆಗಳು ಮತ್ತು ಅಗತ್ಯಗಳನ್ನು ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ, ಪಾರದರ್ಶಕವಾಗಿ ಮತ್ತು ವ್ಯಕ್ತಿಗತ ಸೇವೆಯೊಂದಿಗೆ ಒದಗಿಸುವುದಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದೇವೆ’ ಎಂದು ಕಂಪನಿಯ ಮಾರಾಟ ಮತ್ತು ಸೇವೆಗಳ ವಿಭಾಗದ ಹಿರಿಯ ಉಪಾಧ್ಯಕ್ಷ ನವೀನ್‌ ಸೋನಿ ತಿಳಿಸಿದ್ದಾರೆ.

‘ಮೇ ತಿಂಗಳಿಗೆ ಹೋಲಿಸಿದರೆ ಸದ್ಯ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ. ಹೊಸ ಹಣಕಾಸು ಯೋಜನೆಗಳನ್ನು ನೀಡುತ್ತಿರುವುದರಿಂದ ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸ ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತಿದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು