ಸೋಮವಾರ, ಸೆಪ್ಟೆಂಬರ್ 28, 2020
20 °C

ವೊಡಾಫೋನ್‌ ಐಡಿಯಾ, ಏರ್‌ಟೆಲ್‌ಗೆ ಟ್ರಾಯ್‌ ಪ್ರಶ್ನೆ

ಪಿಟಿಐ Updated:

ಅಕ್ಷರ ಗಾತ್ರ : | |

ದೂರಸಂಪರ್ಕ ಸೇವೆಗಳು–ಪ್ರಾತಿನಿಧಿಕ ಚಿತ್ರ

ನವದೆಹಲಿ: ಗ್ರಾಹಕರಿಗೆ ನೀಡುತ್ತಿರುವ ಆದ್ಯತಾ ಯೋಜನೆಗಳ ವಿಚಾರವಾಗಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕಂಪನಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ಈ ಪ್ರಶ್ನೆಗಳಿಗೆ ಮಂಗಳವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. 

ವಿವಾದಕ್ಕೆ ತುತ್ತಾಗಿರುವ ಈ ಆದ್ಯತಾ ಯೋಜನೆಗಳು ಇತರ ಯೋಜನೆಗಳ ಚಂದಾದಾರರಿಗೆ ನೀಡುತ್ತಿರುವ ಸೇವಾ ಗುಣಮಟ್ಟವನ್ನು ಕಡಿಮೆ ಮಾಡಿಲ್ಲ, ಯಾವ ನಿಯಮವನ್ನೂ ಉಲ್ಲಂಘಿಸಿಲ್ಲ ಎಂಬ ಹೇಳಿಕೆಗೆ ಹೆಚ್ಚಿನ ಆಧಾರ ಒದಗಿಸುವಂತೆ ಟ್ರಾಯ್‌ ಈ ಎರಡೂ ಕಂಪನಿಗಳಿಗೆ ಹೇಳಿದೆ. ಪ್ಲಾಟಿನಂ ಗ್ರಾಹಕರಿಗೆ ಹಾಗೂ ಇತರ ಗ್ರಾಹಕರಿಗೆ ಡೇಟಾ ವೇಗ ನಿಗದಿ ಮಾಡಲಾಗಿದೆಯೇ ಎಂಬುದನ್ನು ವಿವರಿಸಿ ಎಂದು ಏರ್‌ ಟೆಲ್‌ಗೆ ಸೂಚಿಸಲಾಗಿದೆ. ಏರ್‌ಟೆಲ್‌ಗೆ ಒಟ್ಟು ಎರಡು ಡಜನ್‌ಗಿಂತ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಕಂಪನಿಗಳು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿಲ್ಲ. ಈ ಆದ್ಯತಾ ಯೋಜನೆಗಳಿಂದಾಗಿ, ಇತರ ಯೋಜನೆಗಳ ಚಂದಾದಾರರು ಪಡೆಯುವ ಸೇವೆಯ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮ ಉಂಟಾ ಗುವುದಿಲ್ಲ ಎಂಬುದನ್ನು ತೋರಿಸಿಕೊ ಡುವಂತೆ ಟ್ರಾಯ್‌ ಈ ಕಂಪನಿಗಳಿಗೆ ಹೇಳಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು