ಭಾನುವಾರ, ಮೇ 16, 2021
22 °C

ದೀರ್ಘಾವಧಿಯ ಮುನ್ನೋಟ ಸ್ಥಿರ: ಹೀರೊ ಮೊಟೊಕಾರ್ಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಬಿಕ್ಕಟ್ಟಿನಿಂದಾಗಿ ದ್ವಿಚಕ್ರ ವಾಹನ ಉದ್ದಿಮೆಯು ಅಲ್ಪಾವಧಿಯಲ್ಲಿ ಹಲವು ಸವಾಲುಗಳನ್ನು ಎದುರಿಸಲಿದೆ. ಆದರೆ ದೀರ್ಘಾವಧಿಯಲ್ಲಿ ಭಾರತ ಮತ್ತು ಉದ್ದಿಮೆಯ ಒಟ್ಟಾರೆ ಬೆಳವಣಿಗೆಯು ಸ್ಥಿರ ಮತ್ತು ಸಕಾರಾತ್ಮವಾಗಿರಲಿದೆ ಎಂದು ಹೀರೊ ಮೊಟೊಕಾರ್ಪ್‌ ತನ್ನ 2019–20ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ವರದಿಯಲ್ಲಿನ ಅಂಶಗಳನ್ನು ಪಾಲುದಾರರೊಂದಿಗೆ ಹಂಚಿಕೊಂಡ ಕಂಪನಿಯ ಅಧ್ಯಕ್ಷ ಪವನ್‌ ಮುಂಜಲ್‌, ‘ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳವಣಿಗೆ ಸಾಧಿಸಲು ಬಹಳಷ್ಟು ಅವಕಾಶಗಳಿವೆ’ ಎಂದು ತಿಳಿಸಿದರು.

‘ಐದು ವರ್ಷಗಳಲ್ಲಿ 40ಕ್ಕೂ ಅಧಿಕ ದೇಶಗಳಿಗೆ ವಹಿವಾಟು ವಿಸ್ತರಣೆ ಮಾಡಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಮಾಡಿರುವ ವೆಚ್ಚವು ಬೇರೆ ಕಂಪನಿಗಳಿಗಿಂತಲೂ ದುಪ್ಪಟ್ಟಾಗಿದೆ. 2020–21ನೇ ಹಣಕಾಸು ವರ್ಷದಲ್ಲಿ 10 ಕೋಟಿ ಮೋಟರ್‌ಸೈಕಲ್ಸ್‌ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡುವ ಐತಿಹಾಸಿಕ ದಾಖಲೆ ಸೃಷ್ಟಿಸುವ ಹಾದಿಯಲ್ಲಿದ್ದೇವೆ’ ಎಂದು ಹೇಳಿದರು.

‘ಕಂಪನಿಯು ಸಾಲದಿಂದ ಮುಕ್ತವಾಗಿಯೇ ಇರಲಿದ್ದು, ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಕಂಪನಿಯ ನಗದು ಸಂಗ್ರಹ ₹ 14,096 ಕೋಟಿಗೆ ತಲುಪಿದೆ.

‘ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ಸ್ವಂತ ವಾಹನ ಖರೀದಿಗೆ ಮುಂದಾಗಲಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಮುಂದಿನ ಎರಡರಿಂದ ಮೂರು ತಿಂಗಳಿನಲ್ಲಿ ದೇಶಿ ದ್ವಿಚಕ್ರ ವಾಹನ ವಿಭಾಗವು ಸ್ಥಿರತೆಗೆ ಮರಳಲಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು