ನವದೆಹಲಿ: 2022–23ರಲ್ಲಿ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡಿರುವ ದೇಶಗಳ ಸಾಲಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಾಲ್ಕನೇ ಸ್ಥಾನ ಪಡೆದುಕೊಂಡಿದೆ. 2021–22ರಲ್ಲಿ ಯುಎಇ ಏಳನೇ ಸ್ಥಾನದಲ್ಲಿ ಇತ್ತು.
ಕಳೆದ ಹಣಕಾಸು ವರ್ಷದಲ್ಲಿ ಯುಎಇನಿಂದ ಭಾರತಕ್ಕೆ ಬಂದಿರುವ ವಿದೇಶಿ ನೇರ ಹೂಡಿಕೆಯು (ಎಫ್‌ಡಿಐ) ಮೂರುಪಟ್ಟು ಹೆಚ್ಚಾಗಿದ್ದು ₹27,470 ಕೋಟಿಗೆ ತಲುಪಿದೆ. 2021–22ರಲ್ಲಿ ಇದು ₹8,446 ಕೋಟಿಯಷ್ಟು ಇತ್ತು ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಮಾಹಿತಿ ನೀಡಿದೆ.
ಭಾರತವು 2022ರ ಫೆಬ್ರುವರಿ 18ರಂದು ಯುಎಇನೊಂದಿಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಮಾಡಿಕೊಂಡಿದ್ದು, ಅದು 2022ರ ಮೇ 1ರಿಂದ ಜಾರಿಗೆ ಬಂದಿದೆ. ಭಾರತದಲ್ಲಿ ಯುಎಇ ಹೂಡಿಕೆ ಹೆಚ್ಚಾಗಲು ಇದು ಪ್ರಮುಖ ಪಾತ್ರ ವಹಿಸಿದೆ ಎಂದು ಶಾರ್ದೂಲ್ ಅಮರ್‌ಚಂದ್ ಮಂಗಲ್‌ದಾಸ್ ಆ್ಯಂಡ್ ಕೋ. ಪಾಲುದಾರ ರುದ್ರಕುಮಾರ್ ಪಾಂಡೆ ಹೇಳಿದ್ದಾರೆ.
ಸೇವೆಗಳು, ಜಲ ಸಾರಿಗೆ, ವಿದ್ಯುತ್ ಮತ್ತು ನಿರ್ಮಾಣ ಚಟುವಟಿಕೆಗಳ ವಲಯಗಳಲ್ಲಿ ಯುಎಇ ಹೂಡಿಕೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.