ಮಂಗಳವಾರ, ಜೂನ್ 2, 2020
27 °C

ಉಜ್ವಲ: ಮನೆ ಬಾಗಿಲಿಗೆ ಸಿಲಿಂಡರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಪ್ರಧಾನಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಎಲ್ಲ ಬಳಕೆದಾರರಿಗೆ ಏಪ್ರಿಲ್‌ನಿಂದ ಜೂನ್‌ವರೆಗೆ ಮೂರು ಎಲ್‌ಪಿಜಿ (ಅಡುಗೆ ಅನಿಲ) ರೀಫಿಲ್‌ ಸಿಲಿಂಡರ್‌ ಗಳನ್ನು ಗ್ರಾಹಕರ ಮನೆ ಬಾಗಿಲಿಗೇ ಉಚಿತವಾಗಿ ವಿತರಿಸಲಾಗುವುದು. ಯಾರೂ ಕಚೇರಿ ಬಳಿ ಬರುವ ಅಗತ್ಯ ಇಲ್ಲ’ ಎಂದು ಇಂಡಿಯನ್‌ ಆಯಿಲ್‌ ಕಂಪನಿಯ (ಐಒಸಿ) ಉಪ ಮಹಾಪ್ರಬಂಧಕ ನೂರಾನ ಅವರು ತಿಳಿಸಿದ್ದಾರೆ.

ಸಿಲಿಂಡರ್‌ ಖರೀದಿ ವೆಚ್ಚ ಭರಿಸಲು ಚಿಲ್ಲರೆ ಮಾರಾಟದ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಲಾಗು
ವುದು. ಹಣ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ಗ್ರಾಹಕರು ದೃಢೀಕರಣದ ಎಸ್ಎಂಎಸ್ ಪಡೆಯಲಿದ್ದಾರೆ.

ಸಿಲಿಂಡರ್‌ನ ನಗದು ಮೆಮೊದಲ್ಲಿಯೇ ರೀಫಿಲ್‌ ಸಿಲಿಂಡರ್ ಸ್ವೀಕೃತಿಯನ್ನು ಸೇರಿಸಲಾಗಿದೆ. ಗ್ರಾಹಕರು ಐವಿಆರ್‌ಎಸ್ / ಎಸ್‌ಎಂಎಸ್ ಮೂಲಕ ಸಿಲಿಂಡರ್‌ ಗಳನ್ನು ಬುಕ್ ಮಾಡಬಹುದು, ಯಾವುದೇ ದೂರವಾಣಿ ಸಂಖ್ಯೆಯಿಂದಲಾದರೂ ಐವಿಆರ್‌ಎಸ್ ಮೂಲಕ ಮತ್ತು ವಾಟ್ಸ್‌ಆ್ಯಪ್‌/ಪೇಟಿಎಂ/ ಆನ್‌ಲೈನ್ ಇತ್ಯಾದಿಗಳ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು. ಉಜ್ವಲ ಉಚಿತ ರೀಫಿಲ್‌ ಸಿಲಿಂಡರ್ ಯೋಜನೆ ಅಡಿಯಲ್ಲಿ ಪ್ರಯೋಜನ ಪಡೆಯಲು ನಿಯಮಿತವಾದ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ದಾಖಲೆ ಅಥವಾ ಪ್ರತಿಗಳನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ.

ಒಂದೊಮ್ಮೆ ಬ್ಯಾಂಕ್ ಖಾತೆ ಬದಲಾವಣೆ ಇತ್ಯಾದಿ ಇದ್ದಲ್ಲಿ, ಗ್ರಾಹಕರು ವಿತರಕರನ್ನು ಸಂಪರ್ಕಿಸಬೇಕು. ಅವರು ಗ್ರಾಹಕರಿಗೆ ಮಾರ್ಗದರ್ಶನ ಮಾಡುವುದಲ್ಲದೆ, ಅಗತ್ಯ ದಾಖಲೀಕರ ಣಕ್ಕೂ ಸಹಾಯ ಮಾಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು