ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸ್ವದೇಶಿ ನಿರ್ಮಿತ ರೂಟರ್‌ ಲೋಕಾರ್ಪಣೆ

Published 9 ಮಾರ್ಚ್ 2024, 15:37 IST
Last Updated 9 ಮಾರ್ಚ್ 2024, 15:37 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಅತಿವೇಗದ ಹಾಗೂ ಸ್ವದೇಶಿ ನಿರ್ಮಿತ ಐಪಿ/ಎಂಪಿಎಲ್‌ಎಸ್‌ (ಮಲ್ಟಿಪೊಟ್ರೊಕಾಲ್‌ ಲೇಬಲ್‌ ಸ್ವಿಚಿಂಗ್) ರೂಟರ್‌ ಅನ್ನು ನಗರದಲ್ಲಿ ಶನಿವಾರ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಲೋಕಾರ್ಪಣೆಗೊಳಿಸಿದರು.

ನಿವೆಟ್ಟಿ ಸಿಸ್ಟಂನಿಂದ ವಿನ್ಯಾಸಗೊಳಿಸಿರುವ ಈ ರೂಟರ್‌, 2.4 ಟಿಬಿಪಿಎಸ್‌ ಸಾಮರ್ಥ್ಯ ಹೊಂದಿದೆ. ಅತಿವೇಗದ ನೆಟ್‌ವರ್ಕ್‌ ಸೇವೆಯನ್ನು ನೀಡಲಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್‌ ಇಂಡಿಯಾಕ್ಕೆ ಒತ್ತು ನೀಡಿದ್ದಾರೆ. ಅವರ ಆಶಯಕ್ಕೆ ಅನುಗುಣವಾಗಿ ಈ ರೂಟರ್‌ ನಿರ್ಮಾಣವಾಗಿದೆ’ ಎಂದು ಸಚಿವರು ಶ್ಲಾಘಿಸಿದರು. 

‘ರೂಟರ್‌ ನಿರ್ಮಾಣವು ಸಣ್ಣ ವಿಷಯವಲ್ಲ. ಭಾರತದ ಪಾಲಿಗೆ ಮಹತ್ವದ ಸಾಧನೆಯಾಗಿದೆ. ದೇಶದಲ್ಲಿ ಮುಂಬರುವ ದಿನಗಳಲ್ಲಿ ಇಂತಹ ಸಾವಿರಾರು ಉತ್ಪನ್ನಗಳನ್ನು ತಯಾರಿಸಬೇಕಿದೆ. ಈ ರೂಟರ್‌ ಅನ್ನು ರಫ್ತು ಕೂಡ ಮಾಡಬಹುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT