ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐ: ಎರಡನೇ ಸ್ಥಾನಕ್ಕೆ ಏರಿದ ಅಮೆರಿಕ

Last Updated 28 ಮೇ 2021, 22:00 IST
ಅಕ್ಷರ ಗಾತ್ರ

ನವದೆಹಲಿ: 2020-21ನೇ ಸಾಲಿನಲ್ಲಿ ಭಾರತದಲ್ಲಿ ಹೆಚ್ಚು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಮಾಡಿದ ದೇಶಗಳ ಪಟ್ಟಿಯಲ್ಲಿ ಮಾರಿಷಸ್‌ ಹಿಂದಿಕ್ಕಿ, ಅಮೆರಿಕವು 2ನೇ ಸ್ಥಾನಕ್ಕೆ ಬಂದಿದೆ. 2020-21ನೇ ಸಾಲಿನ ಅಂತ್ಯಕ್ಕೆ ಭಾರತದಲ್ಲಿ ಅಮೆರಿಕವು ಎಫ್‌ಡಿಐ ರೂಪದಲ್ಲಿ ₹ 1 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡಿದೆ.

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ವಿಭಾಗವು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ. ಭಾರತದಲ್ಲಿ ಅತಿ ಹೆಚ್ಚು ಎಫ್‌ಡಿಐ ಹೂಡಿಕೆ ಮಾಡಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಸಿಂಗಪುರವು ಸತತ ಮೂರನೇ ವರ್ಷವೂ ಕಾಯ್ದುಕೊಂಡಿದೆ. 2020-21ನೇ ಸಾಲಿನಲ್ಲಿ ಭಾರತದಲ್ಲಿ ಸಿಂಗಪುರದ ಒಟ್ಟು ₹ 1.26 ಲಕ್ಷ ಕೋಟಿಯಷ್ಟು ಎಫ್‌ಡಿಐ ಹೂಡಿಕೆ ಮಾಡಿದೆ.

ಈ ಅವಧಿಯಲ್ಲಿ ಮಾರಿಷಸ್‌ ₹ 40,851 ಕೋಟಿ ಎಫ್‌ಡಿಐ ಹೂಡಿಕೆ ಮಾಡಿದೆ. ಯುಎಇ ₹ 30,421 ಕೋಟಿ, ಕೇಮನ್ ಐಲ್ಯಾಂಡ್ ₹ 20,208 ಕೋಟಿ ಹೂಡಿಕೆ ಮಾಡಿದ್ದು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT