ಸೋಮವಾರ, ಜನವರಿ 25, 2021
17 °C

ಭಾರತಕ್ಕೆ ಎಫ್‌ಡಿಐ: ಎರಡನೇ ಸ್ಥಾನಕ್ಕೇರಿದ ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

ವಿದೇಶಿ ಬಂಡವಾಳ ಹೂಡಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆ (ಎಫ್‌ಡಿಐ) ಮಾಡಿರುವ ದೇಶಗಳ ಸಾಲಿನಲ್ಲಿ ಮಾರಿಷಸ್‌ಅನ್ನು ಹಿಂದಿಕ್ಕಿ ಅಮೆರಿಕ ಎರಡನೇ ಸ್ಥಾನಕ್ಕೇರಿದೆ. ಸಿಂಗಪುರ ಮೊದಲ ಸ್ಥಾನದಲ್ಲಿದೆ.

2019ರಲ್ಲಿ ಮಾರಿಷಸ್‌ ಎರಡನೇ ಸ್ಥಾನದಲ್ಲಿತ್ತು. ಅಮೆರಿಕ ನಾಲ್ಕನೇ ಸ್ಥಾನದಲ್ಲಿತ್ತು. 2020ರ ಏಪ್ರಿಲ್‌–ಸೆಪ್ಟೆಂಬರ್ ಅವಧಿಯಲ್ಲಿ ಅಮೆರಿಕದಿಂದ ₹ 52,688 ಕೋಟಿ ಎಫ್‌ಡಿಐ ಬಂದಿದ್ದು, ಮಾರಿಷಸ್‌ನಿಂದ ₹ 14,800 ಕೋಟಿ ಎಫ್‌ಡಿಐ ಹರಿದುಬಂದಿದೆ. ಇದರಿಂದಾಗಿ ಅಮೆರಿಕ ಎರಡನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿರುವ ಸಿಂಗಪುರದಿಂದ ₹ 61,420 ಕೋಟಿ ಹೂಡಿಕೆ ಆಗಿದೆ.

ಅಮೆರಿಕದಿಂದ ಎಫ್‌ಡಿಐ ಒಳಹರಿವು ಹೆಚ್ಚಾಗುತ್ತಿರುವುದು ಉಭಯ ದೇಶಗಳ ಆರ್ಥಿಕ ಒಪ್ಪಂದವನ್ನು ಇನ್ನಷ್ಟು ಬಲಗೊಳಿಸುವ ಸೂಚನೆ ನೀಡಿದೆ ಎಂದು ತಜ್ಞರು ಹೇಳಿದ್ದಾರೆ. ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ಒಟ್ಟಾರೆ ಎಫ್‌ಡಿಐ ಒಳಹರಿವು ₹ 2.22 ಲಕ್ಷ ಕೋಟಿಗಳಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 15ರಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು