ಶನಿವಾರ, ಅಕ್ಟೋಬರ್ 24, 2020
18 °C

ಸೆ. 29ಕ್ಕೆ ಯುಟಿಐ ಎಎಂಸಿ ಐಪಿಒ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಯುಟಿಐ ಆಸ್ತಿ ನಿರ್ವಹಣಾ ಕಂಪನಿಯ (ಎಎಂಸಿ) ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ಇದೇ ತಿಂಗಳ 29ರಿಂದ ಆರಂಭವಾಗಲಿದ್ದು, ಅಕ್ಟೋಬರ್‌ 1ಕ್ಕೆ ಮುಕ್ತಾಯವಾಗಲಿದೆ.

ಆರಂಭಿಕ ಹೂಡಿಕೆದಾರರಿಗೆ 28ರಿಂದ ಷೇರು ಖರೀದಿಗೆ ಅವಕಾಶ ಸಿಗಲಿದೆ. ಪ್ರತಿ ಷೇರಿನ ಬೆಲೆ ₹ 552 ರಿಂದ ₹ 554ರವರೆಗೆ ಇದೆ. ಐಪಿಒ ಒಟ್ಟಾರೆ ₹ 2,160 ಕೋಟಿ ಸಂಗ್ರಹಿಸುವ ನಿರೀಕ್ಷೆಯನ್ನು ಕಂಪನಿ ಇಟ್ಟುಕೊಂಡಿದೆ.

3.89 ಕೋಟಿ (ಶೇ 30.75) ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಲಿದೆ. ಕಂಪನಿಯ ಅರ್ಹ ಸಿಬ್ಬಂದಿಗೆ 2 ಲಕ್ಷ ಷೇರುಗಳನ್ನು ಕಾಯ್ದಿರಿಸಿದೆ.

ಎಸ್‌ಬಿಐ, ಎಲ್‌ಐಸಿ ತಲಾ 1.04 ಕೋಟಿ ಷೇರುಗಳನ್ನು, ಪಿಎನ್‌ಬಿ ಮತ್ತು ಟಿ ರೋವ್‌ ಪ್ರೈಸ್‌ ಇಂಟರ್‌ನ್ಯಷನಲ್‌ ತಲಾ 38 ಲಕ್ಷ ಷೇರುಗಳನ್ನು ಮಾರಾಟ ಮಾಡಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು