ಶನಿವಾರ, ಏಪ್ರಿಲ್ 4, 2020
19 °C
ಇನ್ನಷ್ಟು ತುಟ್ಟಿಯಾಗಲಿದೆ ಪೆಟ್ರೋಲ್‌, ಡೀಸೆಲ್‌ ದರ

ರಾಜ್ಯಗಳಲ್ಲಿ ವ್ಯಾಟ್‌ ಏರಿಕೆ ಸಂಭವ: ಇಂಧನ ತುಟ್ಟಿ?

ಅನ್ನಪೂರ್ಣಾ ಸಿಂಗ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರವು ಜಿಎಸ್‌ಟಿ ದರದಲ್ಲಿ ಹೆಚ್ಚಳ ಮಾಡುತ್ತಿದ್ದಂತೆಯೇ ರಾಜ್ಯಗಳು ಸಹ ಮೌಲ್ಯವರ್ಧಿತ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ದರ‌ದಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ.

ಮಂದಗತಿಯ ಆರ್ಥಿಕ ಬೆಳವಣಿಗೆ ಮತ್ತು ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಪರಿಹಾರದಲ್ಲಿ ವಿಳಂಬವಾಗುತ್ತಿರುವುದರಿಂದ ರಾಜ್ಯಗಳು ವರಮಾನ ಕೊರತೆ ಎದುರಿಸುತ್ತಿವೆ. ಹೀಗಾಗಿ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ಹೆಚ್ಚಿಸುವ ಸಾಧ್ಯತೆ ಇದೆ.

ಜಿಎಸ್‌ಟಿ ದರಗಳನ್ನು ಶೇ 5 ರಿಂದ ಶೇ 8ಕ್ಕೆ ಮತ್ತು ಶೇ 12ರಿಂದ ಶೇ 15ಕ್ಕೆ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿನ ಸಿಜಿಎಸ್‌ಟಿ ಸಂಗ್ರಹವು ಬಜೆಟ್‌ ಅಂದಾಜಿಗಿಂತಲೂ ಶೇ 40ರಷ್ಟು ಕಡಿಮೆಯಾಗಿದೆ. ಕೇಂದ್ರ ಸರ್ಕಾರಕ್ಕೆ ₹ 80 ಸಾವಿರ ಕೋಟಿಯವರೆಗೂ ವರಮಾನ ನಷ್ಟವಾಗುವ ಸಾಧ್ಯತೆ ಇದೆ. ಇದರಿಂದಾಗಿ  ಒಟ್ಟಾರೆ ತೆರಿಗೆ ವರಮಾನ ಕೊರತೆಯು ₹ 2.03 ಲಕ್ಷ ಕೋಟಿ ತಲುಪಲಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ. 

ತೆರಿಗೆ ದರದಲ್ಲಿ ಪರಿಷ್ಕರಣೆ ಮಾಡುವುದರಿಂದ ಹಣದುಬ್ಬರದ ಪರಿಸ್ಥಿತಿ ಎದುರಾಗಲಿದೆ. ಈಗಾಗಲೇ ಮಂದಗತಿಯಲ್ಲಿ ಬೆಳವಣಿಗೆಯಲ್ಲಿರುವ ಆರ್ಥಿಕತೆಗೆ ಇದರಿಂದ ಇನ್ನಷ್ಟು ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವರದಿಯು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು