ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ವಿನೋದ್ ಜೈಸ್ವಾಲ್ ಅಧಿಕಾರ ವಹಿಸಿಕೊಂಡಿದ್ದಾರೆ.

1991ರಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಬ್ಯಾಂಕ್ನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಅವರು ಬ್ಯಾಂಕ್ನ ಕೋಲ್ಕತ್ತ ವೃತ್ತದಲ್ಲಿ ಉಪ ಪ್ರಧಾನ ವ್ಯವಸ್ಥಾಪಕರು (ವ್ಯವಹಾರ ಮತ್ತು ಕಾರ್ಯಾಚರಣೆ), ಪ್ರಧಾನ ವ್ಯವಸ್ಥಾಪಕರು (ಹಣಕಾಸು ಹಾಗೂ ಮೈಕ್ರೋ ಮಾರ್ಕೆಟ್) ಚೆನ್ನೈ ವೃತ್ತದ ನೆಟ್ವರ್ಕ್–1ರ ಪ್ರಧಾನ ವ್ಯವಸ್ಥಾಪಕ, ಚಂಡೀಗಢ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸೇರಿದಂತೆ ಹಲವು ಪ್ರಮುಖ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ.

ರಾಜ್ಯದಲ್ಲಿ ಎಸ್ಬಿಐ 1,700ಕ್ಕೂ ಅಧಿಕ ಶಾಖೆ/ಕಚೇರಿಗಳನ್ನು ಹೊಂದಿದ್ದು, ₹4.50 ಲಕ್ಷ ಕೋಟಿಗೂ ಹೆಚ್ಚಿನ ಜಮಾ–ಖರ್ಚು ಪಟ್ಟಿ (ಬ್ಯಾಲನ್ಸ್ ಷೀಟ್) ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.