ನವದೆಹಲಿ: ಸಾಲದ ಸುಳಿಗೆ ಸಿಲುಕಿರುವ ವೊಡಾಫೋನ್ ಐಡಿಯಾ ಕಂಪನಿಯು ತನ್ನ ಬಂಡವಾಳ ವೆಚ್ಚದ ಯೋಜನೆಗಳನ್ನು ಮುಂದುವರಿಸಲು ಅಗತ್ಯವಿರುವ ಹಣಕ್ಕಾಗಿ ಬ್ಯಾಂಕೇತರ ಮೂಲಗಳಿಂದ ನಿಧಿ ಸಂಗ್ರಹಿಸಲು ಆಲೋಚಿಸಿದೆ.

ಕಂಪನಿಗೆ ಸಾಲ ನೀಡುವ ಮೊದಲು ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ವಿಚಾರವಾಗಿ ಸ್ಪಷ್ಟನೆ ಸಿಗುವುದಕ್ಕೆ ಬ್ಯಾಂಕ್ಗಳು ಕಾಯುತ್ತಿವೆ ಎಂದು ಕಂಪನಿಯ ಸಿಇಒ ಅಕ್ಷಯ ಮೂಂದ್ರಾ ಹೇಳಿದ್ದಾರೆ.

‘ನಮ್ಮ ಬಂಡವಾಳ ವೆಚ್ಚ ಯೋಜನೆಗಳನ್ನು ಮುಂದುವರಿಸಲು ನಾವು ಮನಸ್ಸು ಹೊಂದಿದ್ದೇವೆ. ಇದಕ್ಕೆ ನಾವು ಬ್ಯಾಂಕೇತರ ಮೂಲಗಳಿಂದಲೂ ಹಣ ಸಂಗ್ರಹಿಸುವ ಆಲೋಚನೆ ನಡೆಸಿದ್ದೇವೆ’ ಎಂದು ಅವರು ಕಂಪನಿಯ ಸಿಇಒ ಆಗಿ ತಮ್ಮ ಕಡೆಯ ದಿನದಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.