ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೊಡಾಫೋನ್‌ ಷೇರು ಬೆಲೆ ಶೇ 26ರಷ್ಟು ಕುಸಿತ

Last Updated 17 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ : ಮೊಬೈಲ್‌ ಸೇವಾ ಸಂಸ್ಥೆ ವೊಡಾಫೋನ್‌ ಷೇರು ಬೆಲೆ ಶುಕ್ರವಾರದ ವಹಿವಾಟಿನಲ್ಲಿ ಶೇ 26ರಷ್ಟು ಕುಸಿತ ದಾಖಲಿಸಿತು.

ದಿನದ ವಹಿವಾಟಿನಲ್ಲಿ ಷೇರು ಬೆಲೆ ₹ 4.51ಕ್ಕೆ ಕುಸಿಯಿತು. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 4,367 ಕೋಟಿಗಳಷ್ಟು ಕಡಿಮೆಯಾಗಿ ₹ 12,959 ಕೋಟಿಗೆ ತಲುಪಿದೆ.

ಮೊಬೈಲ್‌ ಸೇವಾ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಶಾಸನಬದ್ಧವಾಗಿ ₹ 1.47 ಲಕ್ಷ ಕೋಟಿ ಮೊತ್ತ ಪಾವತಿಸಬೇಕು ಎನ್ನುವ ಆದೇಶವನ್ನು ಪರಾಮರ್ಶಿಸಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್‌ ತಳ್ಳಿ ಹಾಕಿದೆ. ಇದೇ 23ರ ಒಳಗೆ ಹಣ ಪಾವತಿಸಬೇಕಾಗಿದೆ. ಇದು ದೂರಸಂಪರ್ಕ ಸಂಸ್ಥೆಗಳ ಆರ್ಥಿಕ ಹೊರೆ ಹೆಚ್ಚಿಸಿದೆ. ಹೀಗಾಗಿ ವೊಡಾಫೋನ್‌ ಷೇರು ಬೆಲೆ ತೀವ್ರ ಕುಸಿತ ಕಂಡಿದೆ.

ಭಾರ್ತಿ ಏರ್‌ಟೆಲ್‌ ಷೇರು ಮಾತ್ರ ಶೇ 5.47ರಷ್ಟು ಏರಿಕೆ ಕಂಡು ₹ 500 ಹತ್ತಿರ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT