ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಲ್ವೊ ವೆಹಿಕಲ್ ಟೆಕ್‌ಲ್ಯಾಬ್‌ಗೆ ಭೂಮಿಪೂಜೆ

Last Updated 17 ಮಾರ್ಚ್ 2022, 15:39 IST
ಅಕ್ಷರ ಗಾತ್ರ

ಬೆಂಗಳೂರು: ವೋಲ್ವೊ ಕಂಪನಿಯು ನಗರದ ಬಾಗಮನೆ ಟೆಕ್‌ ಪಾರ್ಕ್‌ನಲ್ಲಿ ತನ್ನ ‘ವೆಹಿಕಲ್‌ ಟೆಕ್‌ಲ್ಯಾಬ್’ ಸ್ಥಾಪನೆಗೆ ಗುರುವಾರ ಭೂಮಿಪೂಜೆ ನೆರವೇರಿಸಿದೆ. ಇದು ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ನೆರವಾಗಲಿದೆ.

‘ಕಂಪನಿಯ ಬೇರೆ ಬೇರೆ ತಂಡಗಳು ಒಂದೆಡೆ ಸೇರಿ, ಹೊಸ ಪರಿಕಲ್ಪನೆಗಳನ್ನು ಹಂಚಿಕೊಳ್ಳುವ, ಅವುಗಳನ್ನು ಅಭಿವೃದ್ಧಿಪಡಿಸುವ ಮತ್ತು ಉತ್ಪನ್ನ ಸಿದ್ಧಪಡಿಸುವ ವೇದಿಕೆಯನ್ನಾಗಿ ಈ ಟೆಕ್‌ಲ್ಯಾಬ್‌ಅನ್ನು ಬಳಸಿಕೊಳ್ಳುತ್ತೇವೆ’ ಎಂದು ವೋಲ್ವೊ ಗ್ರೂಪ್ ಟ್ರಕ್ಸ್ ಟೆಕ್ನಾಲಜಿಯ ಉಪಾಧ್ಯಕ್ಷ ಸಿ.ಆರ್. ವಿಶ್ವನಾಥ್ ಹೇಳಿದರು.

ವೆಹಿಕಲ್‌ ಟೆಕ್‌ಲ್ಯಾಬ್, ವೋಲ್ವೊ ಸಮೂಹದ ಪಾಲಿಗೆ ಸ್ವೀಡನ್ ಹೊರಗಡೆ ಆರಂಭವಾಗಲಿರುವ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಲಿದೆ. ವೋಲ್ವೊ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT