ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೇಕ್‌ಫಿಟ್‌ನಿಂದ ಎ.ಐ ಆಧಾರಿತ ಹಾಸಿಗೆ ಬಿಡುಗಡೆ

Published 13 ಜೂನ್ 2024, 19:16 IST
Last Updated 13 ಜೂನ್ 2024, 19:16 IST
ಅಕ್ಷರ ಗಾತ್ರ

ಬೆಂಗಳೂರು: ಸ್ಲೀಪ್‌ ಆ್ಯಂಡ್‌ ಹೋಮ್‌ ಸಲ್ಯೂಷನ್ಸ್‌ ಕಂಪನಿಯಾದ ವೇಕ್‌ಫಿಟ್‌,  ದೇಶದಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ವೇಕ್‌ಫಿಟ್‌ ಝೆನ್ಸ್‌ ಹಾಸಿಗೆ ಶ್ರೇಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಶ್ರೇಣಿಯು ರೆಗ್ಯುಲ್ 8 ಮತ್ತು ಟ್ರ್ಯಾಕ್ 8 ಎಂಬ ಎರಡು ಉತ್ಪನ್ನಗಳನ್ನು ಒಳಗೊಂಡಿದೆ. ರೆಗ್ಯುಲ್ 8 ಭಾರತದ ಮೊಟ್ಟ ಮೊದಲ ಟೆಂಪರೇಚರ್ ಕಂಟ್ರೋಲರ್ (ತಾಪಮಾನ ನಿಯಂತ್ರಣ) ಹಾಸಿಗೆ ಆಗಿದೆ. ಆದ್ಯತೆಗೆ ಅನುಗುಣವಾಗಿ ಹಾಸಿಗೆಯ ಮೇಲ್ಮೈ ತಾಪಮಾನವನ್ನು ಬದಲಾಯಿಸುವ ಮತ್ತು ನಿರ್ವಹಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಟ್ರ್ಯಾಕ್ 8 ಎ.ಐ ಆಧಾರಿತ ನಾನ್-ವೇರೆಬಲ್ ನಿದ್ರಾ ಟ್ರ್ಯಾಕರ್ ಆಗಿದೆ. ವ್ಯಕ್ತಿಯ ನಿದ್ರೆಯ ಮಾದರಿಗಳ ಬಗ್ಗೆ ನಿಖರ ಮತ್ತು ವಿವರವಾದ ಮಾಹಿತಿಯನ್ನು ಈ ಟ್ರ್ಯಾಕರ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

‘ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ (ಜಿಐಎಸ್ಎಸ್) ಪ್ರತಿ ವರ್ಷವೂ ಭಾರತೀಯರು ಎದುರಿಸುತ್ತಿರುವ ನಿದ್ರೆಯ ಸಮಸ್ಯೆ ಬಗ್ಗೆ ತಿಳಿಸುತ್ತದೆ. ಈ ವೇಕ್‌ಫಿಟ್ ಝೆನ್ಸ್ ಶ್ರೇಣಿಯು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ’ ಎಂದು ವೇಕ್‌ಫಿಟ್ ಕಂಪನಿಯ ಸಿಇಒ ಮತ್ತು ಸಹ ಸಂಸ್ಥಾಪಕ ಅಂಕಿತ್ ಗಾರ್ಗ್ ತಿಳಿಸಿದ್ದಾರೆ.

‘ಈ ಎರಡು ಉತ್ಪನ್ನಗಳು ಮೊದಲ ಬಾರಿಗೆ ಗ್ರಾಹಕ ಕೇಂದ್ರಿತ ವಿನ್ಯಾಸದೊಂದಿಗೆ ಸುಧಾರಿತ ತಂತ್ರಜ್ಞಾನದಡಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಇದು ಬಳಕೆದಾರರ ಸ್ನೇಹಿಯಾಗಿದ್ದು, ಯಾವುದೇ ರೀತಿಯಲ್ಲಿ ದೈನಂದಿನ ಜೀವನಕ್ಕೆ ಅಡ್ಡಿ ಉಂಟು ಮಾಡುವುದಿಲ್ಲ’ ಎಂದು ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಯಶ್ ದಯಾಳ್ ತಿಳಿಸಿದ್ದಾರೆ.

ಹೋಮ್‌ ಸಲ್ಯೂಷನ್ಸ್‌ ಕಂಪನಿ ವೇಕ್‌ಫಿಟ್‌.ಕೋ ದೇಶದ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಹಾಸಿಗೆ ವೇಕ್‌ಫಿಟ್‌ ಝೆನ್ಸ್‌ ಶ್ರೇಣಿಯನ್ನು ಬಿಡುಗಡೆ ಮಾಡಿದೆ
ಹೋಮ್‌ ಸಲ್ಯೂಷನ್ಸ್‌ ಕಂಪನಿ ವೇಕ್‌ಫಿಟ್‌.ಕೋ ದೇಶದ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಹಾಸಿಗೆ ವೇಕ್‌ಫಿಟ್‌ ಝೆನ್ಸ್‌ ಶ್ರೇಣಿಯನ್ನು ಬಿಡುಗಡೆ ಮಾಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT