ಸಗಟು ವ್ಯಾಪಾರ ಆರಂಭಿಸಿದ ಫ್ಲಿಪ್‌ಕಾರ್ಟ್

ಬೆಂಗಳೂರು: ಫ್ಲಿಪ್‌ಕಾರ್ಟ್ ಕಂಪನಿಯು ದೇಶದಲ್ಲಿ ಸಗಟು ವ್ಯಾಪಾರ ಸೇವೆಯನ್ನು ಆರಂಭಿಸಿದೆ. ‘ತಂತ್ರಜ್ಞಾನದ ಬಳಕೆಯ ಮೂಲಕ ದೇಶದ ಎಂಎಸ್‌ಎಂಇ ಮತ್ತು ಕಿರಾಣಿ ಅಂಗಡಿಗಳ ವಹಿವಾಟು ಸುಲಭವಾಗುವಂತೆ ಮಾಡುವುದು ಇದರ ಮೂಲ ಉದ್ದೇಶ’ ಎಂದು ಫ್ಲಿಪ್‌ಕಾರ್ಟ್ ಹೋಲ್‌ಸೇಲ್‌ನ ಹಿರಿಯ ಉಪಾಧ್ಯಕ್ಷ ಆದರ್ಶ್ ಮೆನನ್ ಹೇಳಿದ್ದಾರೆ.
ಕಿರಾಣಿ ಅಂಗಡಿಗಳಿಗೆ ಒಂದೇ ಉತ್ಪನ್ನವು ವಿವಿಧ ಬ್ರ್ಯಾಂಡ್ ಮತ್ತು ಬೆಲೆಯ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ವಹಿವಾಟಿನ ಮೂಲಕ ಅಮೆಜಾನ್ ಮತ್ತು ಇತರೆ ಆನ್‌ಲೈನ್ ಕಂಪನಿಗಳಿಗೆ ಪೈಪೋಟಿ ನೀಡಲು ಫ್ಲಿಪ್‌ಕಾರ್ಟ್ ಮುಂದಾಗಿದೆ.
‘ಫ್ಲಿಪ್‌ಕಾರ್ಟ್ ಹೋಲ್‌ಸೇಲ್’ನ ಸ್ಮಾರ್ಟ್‌ಫೋನ್ ಆ್ಯಪ್ ಸಹ ಇದ್ದು, ಸದ್ಯ ಬೆಂಗಳೂರು, ಗುರುಗ್ರಾಮ ಮತ್ತು ದೆಹಲಿಯಲ್ಲಿ ಸಿದ್ಧ ಉಡುಪು, ಪಾದರಕ್ಷೆಗಳನ್ನು ಮಾರಾಟ ಮಾಡಲಾಗುತ್ತಿದೆ.
ವರ್ಷಾಂತ್ಯದ ವೇಳೆಗೆ ತನ್ನ ಸಗಟು ವಹಿವಾಟನ್ನು ಇನ್ನೂ 20 ನಗರಗಳಿಗೆ ವಿಸ್ತರಿಸುವ ಹಾಗೂ ದಿನಸಿ ವಸ್ತುಗಳನ್ನು ಮಾರಾಟ ಮಾಡುವ ಯೋಜನೆ ಇದೆ ಎಂದು ಕಂಪನಿ ತಿಳಿಸಿದೆ.
250 ಸ್ಥಳೀಯ ತಯಾರಕರ 50 ಬ್ರ್ಯಾಂಡ್‌ಗಳ 2 ಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ಕೆಲವೇ ದಿನಗಳಲ್ಲಿ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುವ ಭರವಸೆಯನ್ನೂ ಕಂಪನಿ ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.