ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಸ್‌ ಮಾರ್ಕೇಟ್‌ ಪ್ಲೇಸ್‌: ಭಾರತದ ಮಾರಾಟಗಾರರಿಗೆ ವಾಲ್‌ಮಾರ್ಟ್‌ ಆಹ್ವಾನ

Last Updated 22 ಜನವರಿ 2022, 10:33 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ 12 ಕೋಟಿಗೂ ಅಧಿಕ ಖರೀದಿದಾರರಿಗೆ ಸೇವೆ ಒದಗಿಸುವ ಮಾರಾಟಗಾರರ ಸಮುದಾಯ ‘ವಾಲ್‌ಮಾರ್ಟ್‌ ಮಾರ್ಕೆಟ್‌ಪ್ಲೇಸ್‌’ ಸೇರುವಂತೆ ಭಾರತದ ಆಯ್ದ ಮಾರಾಟಗಾರರಿಗೆ ವಾಲ್‌ಮಾರ್ಟ್‌ ಕಂಪನಿಯು ಆಹ್ವಾನ ನೀಡಿದೆ.

ವಾಲ್‌ಮಾರ್ಟ್ ಅಂತಾರಾಷ್ಟ್ರೀಯ ಮಾರಾಟಗಾರರನ್ನು ಆಕರ್ಷಿಸಲು ಮತ್ತು ಮಾರುಕಟ್ಟೆ ಪ್ರದೇಶದ ಉತ್ಪನ್ನಗಳನ್ನು ವಿಸ್ತರಿಸಲು ಭಾರತದಲ್ಲಿ ಹೊಸ ಮಾರಾಟಗಾರರನ್ನು ಹುಡುಕುತ್ತಿದೆ. ಇದರಲ್ಲಿ ಭಾರತದ ಆಯ್ದ ಮಾರಾಟಗಾರರು ವಾಲ್‌ಮಾರ್ಟ್ ಪೂರೈಸುವ ಸೇವೆಗಳ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ.

ಭಾರತೀಯ ರಫ್ತುದಾರರೊಂದಿಗಿನ ಪಾಲುದಾರಿಕೆಯ ಮೂಲಕ, ವಾಲ್‌ಮಾರ್ಟ್ ಈಗ ಭಾರತೀಯ ವ್ಯಾಪಾರಿಗಳಿಗೆ ರಫ್ತು ಮಾಡುವ ಅವಕಾಶ ನೀಡುತ್ತಿದೆ. ಇದು ನಮ್ಮ ಜಾಗತಿಕ ಪೂರೈಕೆ ಸರಪಳಿ ಮೂಲಸೌಕರ್ಯವನ್ನು ಹೆಚ್ಚಿಸಲು ಎಂದು ವಾಲ್‌ಮಾರ್ಟ್ ಉಪಾಧ್ಯಕ್ಷ ಮಿಚೆಲ್ ಮಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT