ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿ‍ಪ್ಟೊ ಬಳಕೆಗೆ ನಿಬಂಧನೆ ಸಡಿಲಿಸಲ್ಲ: ಶಕ್ತಿಕಾಂತ ದಾಸ್‌

Published 11 ಜನವರಿ 2024, 16:42 IST
Last Updated 11 ಜನವರಿ 2024, 16:42 IST
ಅಕ್ಷರ ಗಾತ್ರ

ಮುಂಬೈ: ‘ಕ್ರಿಪ್ಟೊ ಕರೆನ್ಸಿಗಳಿಗೆ ಆರ್ಥಿಕ ಸ್ಥಿರತೆಗೆ ಧಕ್ಕೆ ತರುವ ಸಾಮರ್ಥ್ಯವಿದೆ. ಹಾಗಾಗಿ, ಭಾರತದಲ್ಲಿ ಅವುಗಳ ಬಳಕೆಗೆ ವಿಧಿಸಿರುವ ನಿಬಂಧನೆಗಳನ್ನು ಸಡಿಲಿಸುವುದಿಲ್ಲ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಷೇರುಪೇಟೆಯ ವಿನಿಮಯ ವಹಿವಾಟು ನಿಧಿಯಲ್ಲಿ ಕ್ರಿಪ್ಟೊಕರೆನ್ಸಿಗಳ ವಹಿವಾಟು ಮುಂದುವರಿಸುವುದಕ್ಕೆ ಸಂಬಂಧಿಸಿ ಕೆಲವು ಬದಲಾವಣೆಗೆ ಅಮೆರಿಕದ ಸೆಕ್ಯುರಿಟೀಸ್‌ ಮತ್ತು ಎಕ್ಸ್‌ಚೇಂಜ್ ಕಮಿಷನ್‌ ಅನುಮೋದನೆ ನೀಡಿದೆ. ‌

ಕಾರ್ಯಕ್ರಮದಲ್ಲಿ ಗುರುವಾರ ಪಾಲ್ಗೊಂಡಿದ್ದ ವೇಳೆ ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೇರೆಯವರ ಮಾರುಕಟ್ಟೆಗೆ ಉತ್ತಮವಾಗಿರುವ ಅಂಶಗಳು ನಮಗೂ ಉತ್ತಮವಾಗಿರುತ್ತವೆ ಎಂಬ ಪರಿಭಾವಿಸುವುದು ಸರಿಯಲ್ಲ’ ಎಂದರು.

‘ದೇಶದಲ್ಲಿ ಕ್ರಿಪ್ಟೊಕರೆನ್ಸಿ ಬಳಕೆಗೆ ಆರ್‌ಬಿಐ ವಿಧಿಸಿರುವ ನಿಬಂಧನೆ ಸರಿಯಾಗಿದೆ. ಇದು ನನ್ನ ವೈಯಕ್ತಿಕ ನಿಲುವು ಕೂಡ ಆಗಿದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT