ಬುಧವಾರ, ಡಿಸೆಂಬರ್ 2, 2020
16 °C

ಹಣ ಪಾವತಿಗೂ ವಾಟ್ಸ್‌ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಟ್ಸ್‌ಆ್ಯಪ್‌ ಇನ್ನು ಮುಂದೆ ಸಂದೇಶ, ವಿಡಿಯೊ, ಚಿತ್ರಗಳನ್ನು ರವಾನಿಸಲು ಮಾತ್ರವೇ ಬಳಕೆ ಆಗುವುದಿಲ್ಲ. ವಾಟ್ಸ್‌ಆ್ಯಪ್‌ ಮೂಲಕ ಚಾಟಿಂಗ್ ಮಾಡುವ ಜೊತೆಯಲ್ಲೇ ಹಣವನ್ನು ಇನ್ನೊಬ್ಬರಿಗೆ ಕಳುಹಿಸಬಹುದು, ಬೇರೊಬ್ಬರಿಂದ ಹಣವನ್ನು ಸ್ವೀಕರಿಸಬಹುದು.

ಭಾರತೀಯ ಪಾವತಿ ನಿಗಮ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಯುಪಿಐ ವ್ಯವಸ್ಥೆಯನ್ನು ಬಳಸಿ ಕಾರ್ಯ ನಿರ್ವಹಿಸುವ ಹಣ ಪಾವತಿ ಸೌಲಭ್ಯವನ್ನು ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರಿಗೆ ಶುಕ್ರವಾರದಿಂದ ನೀಡಲಾರಂಭಿಸಿದೆ.

ಯುಪಿಐ ಆಧಾರಿತ ಪಾವತಿ ಸೌಲಭ್ಯ ವನ್ನು ಗ್ರಾಹಕರಿಗೆ ಈಗಾಗಲೇ ನೀಡುತ್ತಿರುವ ಗೂಗಲ್ ಪೇ, ಫೋನ್‌ಪೆ, ಪೇಟಿಎಂ, ಅಮೆಜಾನ್‌ ಪೇ ಮತ್ತು ಇತರ ಕೆಲವು ಆ್ಯಪ್‌ಗಳ ಜೊತೆ ವಾಟ್ಸ್‌ಆ್ಯಪ್‌ ಕೂಡ ಸ್ಪರ್ಧೆಗೆ ಇಳಿಯಲಿದೆ. ಪಾವತಿ ಸೌಲಭ್ಯಕ್ಕೆ ಯಾವುದೇ ಶುಲ್ಕ ಇಲ್ಲ ಎಂದು ವಾಟ್ಸ್‌ಆ್ಯಪ್‌ ಹೇಳಿದೆ.

‘ನಮ್ಮಲ್ಲಿ ಈಗಾಗಲೇ ಲಭ್ಯವಿರುವ ಪ್ರತಿಯೊಂದು ಸೌಲಭ್ಯದಂತೆಯೇ ಪಾವತಿ ಸೌಲಭ್ಯ ಕೂಡ ಸುರಕ್ಷತೆಯನ್ನು ಹೊಂದಿದೆ. ಖಾಸಗಿತನವನ್ನು ಕಾಪಾಡುತ್ತದೆ. ಪ್ರತಿ ವಹಿವಾಟಿಗೂ ಯುಪಿಐ ಗುಪ್ತ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ. ಐಫೋನ್‌ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಅಪ್ಡೇಟ್ ಆಗಿರುವ ನಮ್ಮ ಆ್ಯಪ್ ಬಳಸುತ್ತಿರುವವರಿಗೆ ಪಾವತಿ ಸೌಲಭ್ಯ ಲಭ್ಯವಾಗುತ್ತಿದೆ’ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು