ಭಾನುವಾರ, ಜನವರಿ 19, 2020
23 °C

ಸಗಟು ಹಣದುಬ್ಬರ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಸಗಟು ಬೆಲೆಗಳನ್ನು ಆಧರಿಸಿದ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 2.59ಕ್ಕೆ ಏರಿಕೆಯಾಗಿದೆ.

ಈರುಳ್ಳಿ, ಆಲೂಗೆಡ್ಡೆ ಸೇರಿದಂತೆ ಆಹಾರ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದರಿಂದ ನವೆಂಬರ್‌ನಲ್ಲಿ ಶೇ 0.58ರಷ್ಟಿದ್ದ ಹಣದುಬ್ಬರವು ಒಂದು ತಿಂಗಳಲ್ಲಿ ಶೇ 2.01ರಷ್ಟು ಏರಿಕೆ ದಾಖಲಿಸಿದೆ.

ಆಹಾರ ಬೆಲೆಗಳು ಇದೇ ರೀತಿ ಏರುಗತಿಯಲ್ಲಿ ಸಾಗಿದರೆ ಆರ್ಥಿಕತೆಯು ಮಂದಗತಿಯ ಪ್ರಗತಿ ಮತ್ತು ಗರಿಷ್ಠ ಮಟ್ಟದ ಹಣದುಬ್ಬರದ ನಿಶ್ಚಲ ಹಂತಕ್ಕೆ ತಲುಪಲಿದೆ ಎನ್ನುವ ಆತಂಕ ಕಂಡುಬರುತ್ತಿದೆ.

ತಿಂಗಳ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ವಾರ್ಷಿಕ ಹಣದುಬ್ಬರವು 2019ರ ಏಪ್ರಿಲ್‌ನಲ್ಲಿ ಶೇ 3.24 ಮತ್ತು 2018ರ ಡಿಸೆಂಬರ್‌ನಲ್ಲಿ ಶೇ 3.46ರಷ್ಟಿತ್ತು ಎನ್ನುವುದು ವಾಣಿಜ್ಯ ಸಚಿವಾಲಯದ ಆರ್ಥಿಕ ಸಲಹಾ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ದಾಖಲಾಗಿದೆ.

ಡಿಸೆಂಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ಶೇ 13.12ರಷ್ಟು, ಆಹಾರಯೇತರ ಪದಾರ್ಥಗಳ ಬೆಲೆ ಶೇ 7.72 ರಷ್ಟು ಹೆಚ್ಚಳಗೊಂಡಿದೆ. ಆಹಾರ ಪದಾರ್ಥಗಳಲ್ಲಿ ಈರುಳ್ಳಿ ಬೆಲೆ ಶೇ 69.69ರಷ್ಟು ತುಟ್ಟಿಯಾಗಿದೆ.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು