ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ ಕುಸಿತ

Last Updated 15 ಜೂನ್ 2020, 15:13 IST
ಅಕ್ಷರ ಗಾತ್ರ

ನವದೆಹಲಿ: ಸಗಟು ಮಾರುಕಟ್ಟೆಯಲ್ಲಿನ ಬೆಲೆಗಳು ಮೇನಲ್ಲಿ ನಾಲ್ಕೂವರೆ ವರ್ಷಗಳ ಹಿಂದಿನ ಮಟ್ಟವಾದ ಶೇ 3.21ಕ್ಕೆ ಕುಸಿದಿವೆ.

ತಿಂಗಳ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ವಾರ್ಷಿಕ ಸಗಟು ಹಣದುಬ್ಬರವು, 2019ರ ಇದೇ ಅವಧಿಯಲ್ಲಿನ ಶೇ 2.79ಕ್ಕೆ ಹೋಲಿಸಿದರೆ (–) ಶೇ 3.21ಕ್ಕೆ ಕುಸಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ತಿಳಿಸಿದೆ. 2015ರ ನವೆಂಬರ್‌ನಲ್ಲಿ ಬೆಲೆ ಕುಸಿತವು ಶೇ 3.7ರಷ್ಟಿತ್ತು.

ಆಹಾರ ಪದಾರ್ಥಗಳಲ್ಲಿನ ಬೆಲೆ ಏರಿಕೆಯು ಶೇ 1.13ರಷ್ಟು ದಾಖಲಾಗಿದೆ. ತರಕಾರಿಗಳ ಬೆಲೆ ಶೇ 12.48ರಷ್ಟು ಕುಸಿದರೂ, ಬೇಳೆಕಾಳುಗಳ ಬೆಲೆ ಏರಿಕೆಯು ಶೇ 11.91ರಷ್ಟು ಮತ್ತು ಆಲೂಗೆಡ್ಡೆ ಬೆಲೆ ಶೇ 52.25ರಷ್ಟು ಏರಿಕೆ ದಾಖಲಿಸಿದೆ. ಪ್ರೊಟೀನ್‌ ಸಮೃದ್ಧ ಮೊಟ್ಟೆ, ಮಾಂಸ ಮತ್ತು ಮೀನು ಬೆಲೆ ಏರಿಕೆಯು ಶೇ 1.94ರಷ್ಟಿತ್ತು.

ಕಚ್ಚಾ ತೈಲದ ಬೆಲೆ ಏರಿಕೆಯು ಸಗಟು ಹಣದುಬ್ಬರವು ಇನ್ನಷ್ಟು ಕುಸಿಯುವುದನ್ನು ತಡೆಗಟ್ಟಿದೆ ಎಂದು ‘ಇಕ್ರಾ‘ದ ಮುಖ್ಯ ಆರ್ಥಿಕತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT