ನವದೆಹಲಿ: ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ತನಗೆ ₹ 1,337 ಕೋಟಿ ದಂಡ ವಿಧಿಸಿರುವುದು ಭಾರತದ ಗ್ರಾಹಕರು ಮತ್ತು ಉದ್ದಿಮೆಗಳಿಗೆ ದೊಡ್ಡ ಹಿನ್ನಡೆ ಎಂದು ಗೂಗಲ್ ಕಂಪನಿ ಹೇಳಿದೆ.
ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಬಳಕೆ ಇರುವಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಗೂಗಲ್ ಕಂಪನಿಗೆ ಸಿಸಿಐ ದಂಡ ವಿಧಿಸಿದೆ.
ಈ ಕುರಿತು ಪ್ರಕ್ರಿಯೆ ನೀಡಿರುವ ಕಂಪನಿಯ ವಕ್ತಾರರು, ಸಿಸಿಐ ನಿರ್ಧಾರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆ್ಯಂಡ್ರಾಯ್ಡ್‌ನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ವಿಶ್ವಾಸ ಹೊಂದಿರುವ ಭಾರತೀಯರಿಗೆ ಗಂಭೀರವಾದ ಸುರಕ್ಷತಾ ಅಪಾಯಗಳು ಎದುರಾಗಲಿವೆ. ಭಾರತೀಯರಿಗೆ ಮೊಬೈಲ್ ಸಾಧನಗಳ ಮೇಲಿನ ವೆಚ್ಚವು ಹೆಚ್ಚಾಗಲಿದೆ ಎಂದು ಅವರು ಇ–ಮೇಲ್ ಮೂಲಕ ಹೇಳಿಕೆ ನೀಡಿದ್ದಾರೆ.