ಗುರುವಾರ , ಮೇ 6, 2021
31 °C

ಹಿತಕರ ಮಟ್ಟದಲ್ಲಿ ಬಡ್ಡಿ ದರ: ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆರ್ಥಿಕ ಬೆಳವಣಿಗೆಗೆ ಇಂಬು ಕೊಡುವ ಉದ್ದೇಶದಿಂದ ಬಡ್ಡಿ ದರಗಳನ್ನು ಸಾಧ್ಯವಾದಷ್ಟು ದಿನ ಹಿತಕರ ಮಟ್ಟದಲ್ಲಿಯೇ ಇರಿಸಿಕೊಳ್ಳಲು ಯತ್ನಿಸುವುದಾಗಿ ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖರಾ ಹೇಳಿದ್ದಾರೆ.

ಕೋವಿಡ್–19 ಹರಡುವುದನ್ನು ತಡೆಯುವ ಉದ್ದೇಶದಿಂದ ಸ್ಥಳೀಯ ಮಟ್ಟದಲ್ಲಿ ಜಾರಿಗೆ ಬರುತ್ತಿರುವ ಲಾಕ್‌ಡೌನ್‌ ಕ್ರಮಗಳಿಂದಾಗಿ ಬ್ಯಾಂಕ್‌ಗಳ ಎನ್‌ಪಿಎ ಪರಿಸ್ಥಿತಿ ಏನಾಗಬಹುದು ಎಂಬುದನ್ನು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

‘ಕೋವಿಡ್–19 ಕಾಯಿಲೆಗೆ ತುತ್ತಾದವರಿಗೆ ಚಿಕಿತ್ಸೆ ಒದಗಿಸಲು ತುರ್ತಾಗಿ ವೈದ್ಯಕೀಯ ಸೌಲಭ್ಯ ಒದಗಿಸಲು ಎಸ್‌ಬಿಐ ₹ 30 ಕೋಟಿ ತೆಗೆದಿರಿಸಿದೆ. ನಾವು ಎನ್‌ಜಿಒಗಳು ಹಾಗೂ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಜೊತೆ ಕೈಜೋಡಿಸುತ್ತಿದ್ದೇವೆ’ ಎಂದು ಕೂಡ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು