ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಡರ್‌ಲಾದಿಂದ ‘ವಂಡರ್ ಕಿಚನ್’

Last Updated 17 ಜೂನ್ 2020, 14:12 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಅಮ್ಯೂಸ್‌ಮೆಂಟ್‌ ಪಾರ್ಕ್ ಮತ್ತು ಆತಿಥ್ಯ ಬ್ರ್ಯಾಂಡ್‌ ಆಗಿರುವ, ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್, ತನ್ನ ವಹಿವಾಟು ವಿಸ್ತರಣೆಯ ಭಾಗವಾಗಿ ಪಾರ್ಸಲ್ ಮತ್ತು ಹೋಮ್ ಡೆಲಿವರಿ ಸೇವೆಗಳನ್ನು ಆರಂಭಿಸಿದೆ.

ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ‘ವಂಡರ್ ಕಿಚನ್’ ಮಳಿಗೆ ಆರಂಭಿಸಿದೆ.

ಸಸ್ಯಹಾರಿ ಮತ್ತು ಮಾಂಸಹಾರಿ ಭಕ್ಷ್ಯಗಳನ್ನು ಪೂರೈಸುವ ಬಹು-ಪಾಕ ಪದ್ಧತಿಯ ಮಳಿಗೆ ಇದಾಗಿದೆ. ಆನ್‌ಲೈನ್ ಆರ್ಡರ್‌ ಮತ್ತು ಮತ್ತು ಹೋಮ್ ಡೆಲಿವರಿ ಸೇವೆ ಒದಗಿಸಲು ಸ್ವಿಗ್ಗಿ ಮತ್ತು ಜೊಮಾಟೊ ಜೊತೆ ಒಪ್ಪಂದ ಮಾಡಿಕೊಂಡಿದೆ.ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸಲಿದ್ದು, 5 ಕಿ.ಮೀ ವ್ಯಾಪ್ತಿಯಲ್ಲಿ ತನ್ನ ಸೇವೆ ಒದಗಿಸಲಿದೆ.

‘ಕೋವಿಡ್ -19 ಬಿಕ್ಕಟ್ಟು ಕಳೆದ ಕೆಲವು ತಿಂಗಳುಗಳಲ್ಲಿ ಜಗತ್ತನ್ನು ಸಂಪೂರ್ಣವಾಗಿ ಬದಲಾಯಿಸಿದೆ. ನಾವೆಲ್ಲರೂ ನಮ್ಮ ಮನೆಗಳಲ್ಲಿ ಬಂಧಿಸಲ್ಪಟ್ಟಿದ್ದೇವೆ, ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಪ್ರತಿಯೊಬ್ಬರೂ ಇದರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ರೆಸಾರ್ಟ್ ಉದ್ಯಮದ ಮೇಲೆಯೂ ಅತ್ಯಧಿಕ ಪರಿಣಾಮ ಬೀರಿದೆ. ಈ ಕಷ್ಟದ ಸಮಯದಲ್ಲಿ, ನಮ್ಮ ಅನುಭವಿ ಸಿಬ್ಬಂದಿಯ ಬೆಂಬಲದೊಂದಿಗೆ ಹೊಸ ಉದ್ಯಮ ಪ್ರಾರಂಭಿಸಿದ್ದೇವೆ. ಉತ್ತಮ ರುಚಿ, ಸುರಕ್ಷಿತ ಮತ್ತು ನೈರ್ಮಲ್ಯದ ಆಹಾರಕ್ಕಾಗಿ ನಿರಂತರವಾಗಿ ಬೇಡಿಕೆ ಇದೆ. ಸುರಕ್ಷತಾ ನಿಯಮ‌ಗಳ ಪ್ರಕಾರ ನಾವು ತಾಜಾ, ಉತ್ತೇಜಕ ಹೊಸ ಅಭಿರುಚಿಗಳನ್ನು ನೀಡುತ್ತಿದ್ದೇವೆ’ ಎಂದು ವಂಡರ್‌ಲಾ ಹಾಲಿಡೇಸ್‌ನ ನಿರ್ದೇಶಕ ಅರುಣ್ ಚಿಟ್ಟಿಲಪ್ಪಿಲ್ಲಿ ತಿಳಿಸಿದ್ದಾರೆ.

ಸಣ್ಣ ಪಾರ್ಟಿಗಳು / ಹುಟ್ಟುಹಬ್ಬದ ಕಾರ್ಯಗಳನ್ನು ಸಹ ಕೈಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗೆ: 89717 65557, 89716 65557

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT