ಭಾನುವಾರ, ಮಾರ್ಚ್ 26, 2023
32 °C

ಫಿನ್ಲೆಂಡ್‌ ಕಂಪನಿ ಜತೆ ವುಡ್‌ ಬಾರ್ನ್‌ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಪೂರ್ಣವಾಗಿ ಮರದ ಉತ್ಪನ್ನಗಳನ್ನೇ ಬಳಸಿ ಮನೆಗಳನ್ನು ನಿರ್ಮಿಸುವ ವುಡ್‌ ಬರ್ನ್‌ ಇಂಡಿಯಾ ಕಂಪನಿಯು, ಕಡಿಮೆ ಕಾಲಾವಧಿಯಲ್ಲಿ ಇಂತಹ ಮನೆಗಳ ನಿರ್ಮಾಣ ಕೈಗೊಳ್ಳುವ ಉದ್ದೇಶದಿಂದ ಫಿನ್ಲೆಂಡ್‌ನ ಲಮೆಕೊ ಎಲ್‌ಎಚ್‌ಟಿ ಒವೈ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ.

ಅಲ್ಪಾವಧಿಯಲ್ಲಿ ಮರದ ಮನೆಗಳನ್ನು ನಿರ್ಮಿಸಲು ಕೆನಡಾದ ವಿವಿಧ ಮರದ ಉತ್ಪನ್ನಗಳನ್ನು ಬಳಸಲೂ ಉದ್ದೇಶಿಸಿದೆ.

ಕಂಪನಿಯು ನಿರ್ಮಿಸಿರುವ ಇಂತಹ ಮನೆ ಮತ್ತು ಕಾಟೇಜ್‌ಗಳು ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಇಂಡಿಯಾ ವುಡ್‌ ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಈ ಮೇಳಕ್ಕೆ ಸೋಮವಾರ (ಮಾ.2) ಕೊನೆಯ ದಿನವಾಗಿದೆ.

‘ಫಿನ್ಲೆಂಡ್‌ನ ಕಂಪನಿಯ ನೆರವಿನಿಂದ ಪರಿಸರ ಸ್ನೇಹಿ ಮರದ ಮನೆ ಮತ್ತು ಕಾಟೇಜ್‌ಗಳನ್ನು ನಿರ್ಮಿಸುವ ಸಮಯ 36 ಗಂಟೆಗಳಿಂದ 12 ಗಂಟೆಗೆ ಇಳಿದಿದೆ’ ಎಂದು ವುಡ್‌ ಬರ್ನ್‌ ಇಂಡಿಯಾದ ಅಧ್ಯಕ್ಷ ಸಂಜಯ್‌ ಶರ್ಮಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು