ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಜನವರಿ ತಿಂಗಳ ಹಣದುಬ್ಬರವು 10 ತಿಂಗಳ ಕನಿಷ್ಠ ಮಟ್ಟವಾದ ಶೇ 2.76ಕ್ಕೆ ಇಳಿದಿದೆ.

ಆಹಾರ ಪದಾರ್ಥ ಮತ್ತು ಇಂಧನ ಬೆಲೆಗಳು ಅಗ್ಗವಾಗಿದ್ದರಿಂದ ಈ ಕುಸಿತ ಕಂಡು ಬಂದಿರುವುದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಅಡುಗೆ ಮನೆಯ ಅಗತ್ಯಗಳಾದ ಆಲೂಗೆಡ್ಡೆ, ಈರುಳ್ಳಿ, ಹಣ್ಣು ಮತ್ತು ಹಾಲಿನ ಬೆಲೆಗಳು ಜನವರಿಯಲ್ಲಿ ಅದಕ್ಕೂ ಹಿಂದಿನ ತಿಂಗಳಿಗಿಂತ ಕಡಿಮೆಯಾಗಿವೆ. ಇಂಧನ ಮತ್ತು ವಿದ್ಯುತ್ ವಲಯಗಳಲ್ಲಿನ ಬೆಲೆ ಏರಿಕೆಯು 2018ರ ಡಿಸೆಂಬರ್‌ನಲ್ಲಿನ ಶೇ 8.38ಕ್ಕೆ ಹೋಲಿಸಿದರೆ ಜನವರಿಯಲ್ಲಿ ಶೇ 1.85ಕ್ಕೆ ಇಳಿಕೆಯಾಗಿತ್ತು. ವಾಹನಗಳ ಇಂಧನ ಅಗ್ಗವಾಗಿರುವುದೇ ಇದಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.