ನವದೆಹಲಿ: ಏಪ್ರಿಲ್ನಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿತ ಹಣದುಬ್ಬರವು 13 ತಿಂಗಳ ಕನಿಷ್ಠ ಮಟ್ಟವಾದ ಶೇ 0.85ರಷ್ಟು ದಾಖಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ತಿಳಿಸಿದೆ.

ಆಹಾರ ಪದಾರ್ಥಗಳು, ಇಂಧನ ಮತ್ತು ತಯಾರಿಕಾ ಸರಕುಗಳ ಬೆಲೆ ಇಳಿಕೆಯೇ ಇದಕ್ಕೆ ಕಾರಣ. ಮೇ ತಿಂಗಳಿನಲ್ಲಿಯೂ ಸಗಟು ಹಣದುಬ್ಬರ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಮಾರ್ಚ್ನಲ್ಲಿ ಸಗಟು ಹಣದುಬ್ಬರವು ಶೇ 2.05ರಷ್ಟಿತ್ತು. ಕಳೆದ ವರ್ಷದ ಮಾರ್ಚ್ನಲ್ಲಿ ಶೇ 0.26ರಷ್ಟು ದಾಖಲಾಗಿತ್ತು. ಇದಾದ ಬಳಿಕ ಕಡಿಮೆ ದಾಖಲಾಗಿರುವ ತಿಂಗಳು ಇದಾಗಿದೆ.

ಮಾರ್ಚ್ನಲ್ಲಿ ಶೇ 1.57ರಷ್ಟಿದ್ದ ಆಹಾರ ಪದಾರ್ಥಗಳ ಬೆಲೆಯು ಏಪ್ರಿಲ್ನಲ್ಲಿ ಶೇ 0.86ಕ್ಕೆ ಇಳಿಕೆಯಾಗಿದೆ. ತರಕಾರಿಗಳ ಬೆಲೆಯು ಶೇ 15.88ರಿಂದ ಶೇ 18.26ಕ್ಕೆ ಹೆಚ್ಚಳವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈರುಳ್ಳಿ ಬೆಲೆಯು ಶೇ 26.65ರಿಂದ ಶೇ 0.20ಕ್ಕೆ, ಹಣ್ಣುಗಳ ಬೆಲೆಯು ಶೇ 20.78ರಿಂದ ಶೇ 8.38ಕ್ಕೆ, ಆಲೂಗೆಡ್ಡೆ ಮತ್ತು ದ್ವಿದಳ ಧಾನ್ಯಗಳ ದರವು ಶೇ 5.57ರಿಂದ ಶೇ 24.30ಕ್ಕೆ ತಗ್ಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.