ಭಾನುವಾರ, ಏಪ್ರಿಲ್ 11, 2021
27 °C

ಸಗಟು ಹಣದುಬ್ಬರ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಗಟು ಬೆಲೆ ಆಧರಿಸಿದ ಹಣದುಬ್ಬರ ಪ್ರಮಾಣವು ಫೆಬ್ರುವರಿಯಲ್ಲಿ ಶೇಕಡ 4.17ಕ್ಕೆ ಏರಿಕೆ ಕಂಡಿದೆ. ಆಹಾರ ವಸ್ತುಗಳು ಹಾಗೂ ಇಂಧನದ ಬೆಲೆಯಲ್ಲಿ ಆಗಿರುವ ಹೆಚ್ಚಳವು ಹಣದುಬ್ಬರದ ಏರಿಕೆಗೆ ಕಾರಣ.

ಸಗಟು ಹಣದುಬ್ಬರವು ಜನವರಿಯಲ್ಲಿ ಶೇ 2.03ರಷ್ಟು ಇತ್ತು. ಕಳೆದ ವರ್ಷದ ಫೆಬ್ರುವರಿಯಲ್ಲಿ ಇದು ಶೇ 2.26ರಷ್ಟು ಇತ್ತು. ಧಾನ್ಯಗಳ ಬೆಲೆಯಲ್ಲಿನ ಹೆಚ್ಚಳವು ಫೆಬ್ರುವರಿಯಲ್ಲಿ ಶೇ 10.25ರಷ್ಟಾಗಿತ್ತು. ಫೆಬ್ರುವರಿಯಲ್ಲಿ ಹಣ್ಣುಗಳ ಹಣದುಬ್ಬರ ಶೇ 9.48ರಷ್ಟು, ತೈಲ ಮತ್ತು ಇಂಧನ ಹಣದುಬ್ಬರವು ಶೇ 0.58ರಷ್ಟು ಆಗಿತ್ತು.

ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರ ದರವು ಫೆಬ್ರುವರಿಯಲ್ಲಿ ಶೇ 5.03ಕ್ಕೆ ತಲುಪಿದೆ ಎಂದು ಕಳೆದ ವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿ–ಅಂಶಗಳು ಹೇಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು