2025ನೇ ವರ್ಷ ಪೂರ್ಣಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. 2026 ಅನ್ನು ಬರಮಾಡಿಕೊಳ್ಳಲು ಈಗಾಗಲೇ ಸಿದ್ಧತೆಗಳು ಕೂಡ ಪ್ರಾರಂಭಗೊಂಡಿವೆ. ಈ ನಡುವೆ, ಬ್ಯಾಂಕಿನ ವಹಿವಾಟಿಗೆ ಸಂಬಂಧಿಸಿದ ಕೆಲಸಗಳನ್ನು ಕೂಡ ಶೀಘ್ರವಾಗಿ ಮುಗಿಸಿಕೊಳ್ಳಬೇಕು ಎಂದು ಜನರು ಯೋಚಿಸುತ್ತಿರುತ್ತಾರೆ.

2025ರ ಮುಕ್ತಾಯಕ್ಕೆ ಇನ್ನು 12 ದಿನಗಳು ಬಾಕಿ ಉಳಿದಿವೆ. ಆದರೆ, ಬ್ಯಾಂಕಿನ ಕಾರ್ಯಗಳನ್ನು ಮುಗಿಸಿಕೊಳ್ಳಲು ನಿಮಗೆ ಉಳಿದಿರುವುದು ಕೇವಲ 3 ದಿನಗಳು ಮಾತ್ರ. ಯಾಕೆ ಅಂತ ನಿಮಗೂ ಪ್ರಶ್ನೆಗಳು ಮೂಡಬಹುದು. ಈ ಲೇಖನ ಪೂರ್ಣವಾಗಿ ಓದಿದ ಬಳಿಕ ನಾವು ಹೇಳುತ್ತಿರುವುದು ನಿಮಗೆ ನಿಜ ಅನಿಸದೇ ಇರದು.

ಸರ್ಕಾರಿ, ಅರೆ ಸರ್ಕಾರಿ, ಬ್ಯಾಂಕ್ ನೌಕರರು ಹಾಗೂ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವವರು ಕೂಡ ಈಗಾಗಲೇ ಹೊಸ ವರ್ಷಕ್ಕೆ ಯೋಜನೆಗಳನ್ನು ರೂಪಿಸಿಕೊಂಡಿರುತ್ತಾರೆ. ಅದರಂತೆ, ಡಿಸೆಂಬರ್ 24ರಂದು ಕ್ರಿಸ್ಮಸ್ ಈವ್ ಹಾಗೂ 25ರಂದು ಕ್ರಿಸ್ಮಸ್ ಕೂಡ ಬಂದಿದೆ. ಹಾಗಾಗಿ ಅನೇಕ ಉದ್ಯೋಗಿಗಳು ತಮ್ಮ ಪಾಲಿನ ರಜೆಗಳನ್ನು ಮುಗಿಸಿಕೊಂಡು ದೀರ್ಘಕಾಲ ರಜೆಯ ಮಜಾ ಅನುಭವಿಸಲು ಯೋಜನೆ ಸಿದ್ಧಪಡಿಸಿರುತ್ತಾರೆ.

ನಾಳೆ (ಡಿಸೆಂಬರ್ 19) ಶುಕ್ರವಾರ ಎಂದಿನಂತೆ ಬ್ಯಾಂಕುಗಳು ಸೇರಿದಂತೆ ಎಲ್ಲಾ ಖಾಸಗಿ ಸಂಸ್ಥೆಗಳು ತೆರೆದಿರುತ್ತವೆ. ಆದರೆ, ಡಿ. 20ರ ಶನಿವಾರ ಬಹುತೇಕ ಖಾಸಗಿ ಸಂಸ್ಥೆಗಳಿಗೆ ರಜೆ ಇರುತ್ತದೆ. ಡಿ. 21 ಯಥಾಪ್ರಕಾರ ಭಾನುವಾರ ರಜಾ ದಿನವಾಗಿರುತ್ತದೆ.

ನಿಮಗೆ ಬ್ಯಾಂಕ್ ಕೆಸಲಗಳನ್ನು ಮುಗಿಸಿಕೊಳ್ಳಲು ಉಳಿದಿರುವ ದಿನಗಳು ಅಂದರೆ, ಅದು ಡಿಸೆಂಬರ್ 22 ಹಾಗೂ 23 ಮಾತ್ರ. ಡಿಸೆಂಬರ್ 24 ಕ್ರಿಸ್ಮಸ್ ಈವ್ ಹಾಗೂ 25ರಂದು ಕ್ರಿಸ್ಮಸ್ ಇರುವುದರಿಂದ ರಜೆ ಇರಲಿದೆ. ಈ ಹಬ್ಬಕ್ಕೆ ತೆರಳುವ ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಯ ನೌಕರರು ಬಾಕಿ ಉಳಿದಿರುವ ತಮ್ಮ ಪಾಲಿನ ರಜೆಗಳನ್ನು ಬಳಸಿಕೊಂಡು ವರ್ಷಾಂತ್ಯದ ಪ್ಲಾನ್ ರೂಪಿಸುತ್ತಾರೆ.

ಹಾಗಾಗಿ, ಡಿಸೆಂಬರ್ 26ರಂದು ಬ್ಯಾಂಕ್ಗಳು ಕಾರ್ಯ ನಿರ್ವಹಿಸುತ್ತಿದ್ದರೂ ನಿಮ್ಮ ಕೆಲಸಗಳು ಆಗುತ್ತದೆ ಎಂದು ಹೇಳಲಾಗದು. ಇನ್ನೂ, ಡಿಸೆಂಬರ್ 27 ನಾಲ್ಕನೇ ಶನಿವಾರ ಹಾಗೂ 28ರಂದು ಭಾನುವಾರ ಬರುತ್ತದೆ.

ಹಾಗಾಗಿ, ಬ್ಯಾಂಕ್ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಗಳು ಬಾಕಿ ಉಳಿದಿದ್ದರೂ ಡಿಸೆಂಬರ್, 19, 22 ಹಾಗೂ 23ರಂದು ಮಾಡಿ ಮುಗಿಸಿಕೊಳ್ಳುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.