ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಮ್ಯಾಟೊ ಐಪಿಒಗೆ ‘ಸೆಬಿ’ ಒಪ್ಪಿಗೆ

Last Updated 5 ಜುಲೈ 2021, 15:56 IST
ಅಕ್ಷರ ಗಾತ್ರ

ನವದೆಹಲಿ: ಹೋಟೆಲ್‌, ರೆಸ್ಟಾರೆಂಟ್‌ಗಳಿಂದ ಆಹಾರವನ್ನು ಮನೆಬಾಗಿಲಿಗೆ ತಲುಪಿಸುವ ಸೇವೆ ನೀಡುವ ಜೊಮ್ಯಾಟೊ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತಗೊಳಿಸುವ (ಐಪಿಒ) ಪ್ರಕ್ರಿಯೆಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಒಪ್ಪಿಗೆ ನೀಡಿದೆ.

ಕಂಪನಿಯು ₹ 8,250 ಕೋಟಿ ಮೌಲ್ಯದ ಐಪಿಒಗೆ ಮುಂದಾಗಿದೆ. ಇದರಲ್ಲಿ ಹೊಸ ಷೇರುಗಳ ವಿತರಣೆಯ ಮೂಲಕ ₹ 7,500 ಕೋಟಿ ಹಾಗೂ ಇನ್ಫೊ ಎಡ್ಜ್‌ (ಇಂಡಿಯಾ) ಲಿಮಿಟೆಡ್‌ ಕಂಪನಿಯು ಜೊಮ್ಯಾಟೊದಲ್ಲಿ ಹೊಂದಿರುವ ಷೇರುಗಳನ್ನು ಆಫರ್‌ ಫಾರ್ ಸೇಲ್‌ (ಒಎಫ್‌ಸಿ) ಮೂಲಕ ₹ 750 ಕೋಟಿಗೆ ಮಾರಾಟ ಮಾಡಲಿದೆ.

ಟೈಗರ್‌ ಗ್ಲೋಬಲರ್‌, ಕೋರಾ ಮತ್ತು ಇತರೆ ಹೂಡಿಕೆದಾರರಿಂದ ಕಂಪನಿಯು ಫೆಬ್ರುವರಿಯಲ್ಲಿ ₹ 1,800 ಕೋಟಿ ಬಂಡವಾಳ ಸಂಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT