ಅಂಬಿ (ಪುಣೆ): ಜಾರ್ಖಂಡ್ ತಂಡದವರು ಮಂಗಳವಾರ ನಡೆದ ಪಂದ್ಯದಲ್ಲಿ 9 ರನ್ಗಳಿಂದ ಆಂಧ್ರ ತಂಡಕ್ಕೆ ಸೋತರೂ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಎ ಗುಂಪಿನಲ್ಲಿ ಅಗ್ರಸ್ಥಾನದೊಡನೆ ಫೈನಲ್ ತಲುಪಿತು.

ಬ್ಯಾಟಿಂಗ್ ಮಾಡಲು ಕಳಿಸಲ್ಪಟ್ಟ ಆಂಧ್ರ 7 ವಿಕೆಟ್ಗೆ 203 ರನ್ ಗಳಿಸಿತು. ನಂತರ ಜಾರ್ಖಂಡ್ ತಂಡ ಹೋರಾಟ ತೋರಿದರೂ 8 ವಿಕೆಟ್ಗೆ 194 ರನ್ ಗಳಿಸಲಷ್ಟೇ ಶಕ್ತವಾಯಿತು. ಆಂಧ್ರ ತಂಡವು ಸಮಾಧಾನಕರ ಜಯಪಡೆಯಿತು.

8 ಅಂಕ ಪಡೆದ ಜಾರ್ಖಂಡ್ +0.221 ನಿವ್ವಳ ರನ್ ದರದೊಡನೆ ಅಗ್ರಸ್ಥಾನ ಪಡೆಯಿತು. ಇಷ್ಟೇ ಅಂಕ ಪಡೆದ ಆಂಧ್ರ ತಂಡದ ರನ್ ದರ –0.113 ಕಡಿಮೆಯಾಗಿತ್ತು.

ಆಂಧ್ರದ ಪರ ಭಾರತ ತಂಡದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ 22 ಎಸೆತಗಳಲ್ಲಿ 45 ರನ್ ಸಿಡಿಸಿದರಲ್ಲದೇ, ನಂತರ 32 ರನ್ನಿಗೆ 2 ವಿಕೆಟ್ ಪಡೆದು ಮಿಂಚಿ ಪಂದ್ಯದ ಆಟಗಾರನಾದರು.

ಸಂಕ್ಷಿಪ್ತ ಸ್ಕೋರು: 20 ಓವರುಗಳಲ್ಲಿ 7ಕ್ಕೆ 203 (ಶ್ರೀಕರ್ ಭರತ್ 35, ಅಶ್ವಿನ್ ಹೆಬ್ಬಾರ್ 30, ನಿತೀಶ್ ಕುಮಾರ್ ರೆಡ್ಡಿ 45; ರಾಜನ್ದೀಪ್ ಸಿಂಗ್ 35ಕ್ಕೆ2); ಜಾರ್ಖಂಡ್: 20 ಓವರುಗಳಲ್ಲಿ 8ಕ್ಕೆ 194 (ಇಶಾನ್ ಕಿಶನ್ 35, ವಿರಾಟ್ ಸಿಂಗ್ 77, ರಾಬಿನ್ ಮಿಂಜ್ 25; ನಿತೀಶ್ ಕುಮಾರ್ ರೆಡ್ಡಿ 32ಕ್ಕೆ2, ಸೌರಭ್ ಕುಮಾರ್ 21ಕ್ಕೆ2).

ಮಧ್ಯಪ್ರದೇಶಕ್ಕೆ ನಿರಾಸೆ:

ಭಾರತ ತಂಡದ ಮಾಜಿ ಆಟಗಾರ ವೆಂಕಟೇಶ ಅಯ್ಯರ್ ಅರ್ಧ ಶತಕ ಗಳಿಸಿದರೂ, ಮಹತ್ವ ಕಳೆದುಕೊಂಡ ‘ಎ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಮಧ್ಯ ಪ್ರದೇಶ ತಂಡ 2 ವಿಕೆಟ್ಗಳಿಂದ ಪಂಜಾಬ್ ತಂಡಕ್ಕೆ ಮಣಿಯಿತು.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ: 20 ಓವರುಗಳಲ್ಲಿ 8ಕ್ಕೆ 225 (ವೆಂಕಟೇಶ ಅಯ್ಯರ್ 70, ಅಂಕಿತ್ ವರ್ಮಾ 31, ಮಂಗೇಶ್ ಯಾದವ್ 28; ಗುರ್ನೂರ್ ಬ್ರಾರ್ 45ಕ್ಕೆ3, ರಮಣದೀಪ್ ಸಿಂಗ್ 38ಕ್ಕೆ2); ಪಂಜಾಬ್: 19.1 ಓವರುಗಳಲ್ಲಿ 8ಕ್ಕೆ 226 (ಹರನೂರ್ ಸಿಂಗ್ 64, ಅನ್ಮೋಲ್ಪ್ರೀತ್ ಸಿಂಗ್ 38, ಸಲೀಲ್ ಅರೋರಾ 50, ರಮಣದೀಪ್ ಸಿಂಗ್ 35; ಮಂಗೇಶ್ ಯಾದವ್ 38ಕ್ಕೆ2, ಶಿವಂ ಶುಕ್ಲಾ 39ಕ್ಕೆ3).

ಮುಂಬೈಗೆ ಜಯ:

ಅನುಭವಿ ಅಜಿಂಕ್ಯ ರಹಾನೆ ಅವರ ಅಜೇಯ 72 ರನ್ (41ಎ) ಹಾಗೂ ಸರ್ಫರಾಜ್ ಖಾನ್ ಅವರ ಮಿಂಚಿನ 73 ರನ್ಗಳ (22 ಎಸೆತ) ನೆರವಿನಿಂದ ಮುಂಬೈ ತಂಡ, ಸೈಯದ್ ಮುಷ್ತಾಕ್ ಅಹ್ಮದ್ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಸೂಪರ್ ಲೀಗ್ ಬಿ ಗುಂಪಿನ ಪಂದ್ಯದಲ್ಲಿ ಮಂಗಳವಾರ ರಾಜಸ್ಥಾನ ತಂಡವನ್ನು ಮೂರು ವಿಕೆಟ್ಗಳಿಂದ ಸೋಲಿಸಿತು.

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ: 20 ಓವರುಗಳಲ್ಲಿ 4ಕ್ಕೆ 216 (ರಾಮನಿವಾಸ್ 48, ದೀಪಕ್ ಹೂಡಾ 51, ಮುಕುಲ್ ಚೌಧರಿ ಔಟಾಗದೇ 54, ಮಹಿಪಾಲ್ ಲೊಮ್ರೊರ್ 39); ಮುಂಬೈ: 18.1 ಓವರುಗಳಲ್ಲಿ 7ಕ್ಕೆ 217 (ಅಜಿಂಕ್ಯ ರಹಾನೆ ಔಟಾಗದೇ 72, ಸರ್ಫರಾಜ್ ಖಾನ್ 73, ಅಥರ್ವ ಅಂಕೋಲೆಕರ್ 29; ಮಾನವ್ ಸುತಾರ್ 23ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.