ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಸಮವಸ್ತ್ರ ಹಿಂಪಡೆದ ಜೊಮಾಟೊ

Published 20 ಮಾರ್ಚ್ 2024, 15:09 IST
Last Updated 20 ಮಾರ್ಚ್ 2024, 15:09 IST
ಅಕ್ಷರ ಗಾತ್ರ

ನವದೆಹಲಿ: ಶುದ್ಧ ಸಸ್ಯಾಹಾರ ವಿತರಣೆ ಮಾಡುವವರು ಹಸಿರು ಸಮವಸ್ತ್ರ ಧರಿಸಿ, ಹಸಿರು ಬಾಕ್ಸ್‌ಗಳಲ್ಲಿಯೇ ಆಹಾರ ಪೂರೈಸಬೇಕು ಎಂದು ಹೊರಡಿಸಿದ್ದ ಆದೇಶವನ್ನು ಜೊಮಾಟೊ ಕಂಪನಿಯು ಬುಧವಾರ ಹಿಂಪಡೆದಿದೆ.

ಕಂಪನಿಯು ಮಂಗಳವಾರ ಸಸ್ಯಾಹಾರಿಗಳಿಗೆ ‘ಪ್ಯೂರ್‌ ವೆಜ್‌ ಮೋಡ್‌’ ಸೇವೆಗೆ ಚಾಲನೆ ನೀಡಿತ್ತು. ಇದಕ್ಕಾಗಿ ‘ಪ್ಯೂರ್ ವೆಜ್ ಫ್ಲೀಟ್’ನಡಿ ಸಸ್ಯಾಹಾರ ವಿತರಣೆಗೆ ಪ್ರತ್ಯೇಕ ತಂಡ ರಚಿಸಿತ್ತು. ಸಾಮಾನ್ಯವಾಗಿ ಜೊಮಾಟೊ ಡೆಲಿವರಿ ಬಾಯ್ಸ್ ಕೆಂಪು ಸಮವಸ್ತ್ರ ಧರಿಸುತ್ತಾರೆ.

ಆದರೆ, ಈ ಫ್ಲೀಟ್‌ನ ತಂಡದ ಸದಸ್ಯರ ಸಮವಸ್ತ್ರವು ಹಸಿರು ಬಣ್ಣದ್ದಾಗಿದ್ದು, ಶುದ್ಧ ಸಸ್ಯಾಹಾರವನ್ನಷ್ಟೇ ವಿತರಣೆ ಮಾಡಲಿದ್ದಾರೆ ಎಂದು ಕಂಪನಿಯ ಸಿಇಒ ದೀಪಿಂದರ್ ಗೋಯಲ್ ಹೇಳಿದ್ದರು.

ಜೊಮಾಟೊ ಆರಂಭಿಸಿದ ಈ ಸೇವೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲವು ಸೊಸೈಟಿಗಳು ಹಾಗೂ ಗೃಹ ಕ್ಷೇಮಾಭಿವೃದ್ಧಿ ಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಅಲ್ಲದೆ, ಕೆಲವು ಸಂಘಗಳು ಜೊಮಾಟೊದ ಸೇವೆಯನ್ನು ತಿರಸ್ಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಹಾಗಾಗಿ, ಹಸಿರು ಸಮವಸ್ತ್ರ ಧರಿಸುವಂತೆ ನೀಡಿದ್ದ ಸೂಚನೆಯನ್ನು ಕಂಪನಿಯು ವಾಪಸ್‌ ಪಡೆದಿದೆ.

‘ಕಂಪನಿ ಒದಗಿಸುವ ಸೇವೆಯಲ್ಲಿ ಹಸಿರು ಸಮವಸ್ತ್ರ ನೀತಿ ಮೂಲಕ ಸಸ್ಯಾಹಾರ ಮತ್ತು ಮಾಂಸಾಹಾರವನ್ನು ಪ್ರತ್ಯೇಕಿಸುವ ಉದ್ದೇಶ ಹೊಂದಿಲ್ಲ. ಪ್ರಸ್ತುತ ಸಾಮಾನ್ಯ ಫ್ಲೀಟ್‌ ಹಾಗೂ ಸಸ್ಯಾಹಾರ ವಿತರಣೆ ಮಾಡುವವರು ಇನ್ನು ಮುಂದೆ ಕೆಂಪು ಸಮವಸ್ತ್ರವನ್ನೇ ಧರಿಸಲಿದ್ದಾರೆ’ ಎಂದು ಗೋಯಲ್‌ ‘ಎಕ್ಸ್‌’ನಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT