ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಐವರಲ್ಲಿ ನಾಲ್ಕು ವೃತ್ತಿಪರರು ಹೊಸ ಉದ್ಯೋಗ ಹುಡುಕುತ್ತಿದ್ದಾರೆ!

Last Updated 18 ಜನವರಿ 2023, 7:28 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಅನಿಶ್ಚಿತತೆ ಮತ್ತು ಉದ್ಯೋಗ ಕಡಿತದ ಭೀತಿಯಿಂದ ಭಾರತದಲ್ಲಿ 5 ವೃತ್ತಿಪರರಲ್ಲಿ 4 ಮಂದಿ 2023 ರಲ್ಲಿ ಹೊಸ ಉದ್ಯೋಗವನ್ನು ಹುಡುಕುತ್ತಿದ್ದಾರೆ ಎಂದು ಲಿಂಕ್ಡ್‌ಇನ್ ವರದಿ ಹೇಳಿದೆ.

ಲಿಂಕ್ಡ್‌ಇನ್ ವರದಿಯ ಪ್ರಕಾರ, 45-54 ವರ್ಷ ವಯಸ್ಸಿನ ಶೇ 64, 18-24 ವರ್ಷ ವಯಸ್ಸಿನ ಶೇ 88 ರಷ್ಟು ಮಂದಿ ಉದ್ಯೋಗ ಬದಲಾವಣೆ ಎದುರು ನೋಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಆರ್ಥಿಕ ‌ಅನಿಶ್ಚತತೆಯ ಹೊರತಾಗಿಯೂ, ವೃತ್ತಿಪರರು ತಮ್ಮ ಕೌಶಲ್ಯ ಮತ್ತು ಪ್ರಗತಿಗೆ ಸೂಕ್ತವಾದ ಅವಕಾಶಗಳನ್ನು ಹುಡುಕುವ ಮೂಲಕ ವೃತ್ತಿ ಜೀವನದಲ್ಲಿ ದೀರ್ಘಾವಧಿ ಯಶಸ್ಸು ನಿರೀಕ್ಷಿಸುತ್ತಿದ್ದಾರೆ.

ಸಮೀಕ್ಷೆಯಲ್ಲಿ ಭಾಗಿಯಾದ ಮುಕ್ಕಾಲು ಭಾಗದಷ್ಟು (ಶೇ 78) ಉದ್ಯೋಗಿಗಳು ಒಂದು ವೇಳೆ ತಾವು ಕೆಲಸ ಬಿಟ್ಟರೆ, ಬೇರೆ ಹುದ್ದೆ ಪಡೆಯುವ ವಿಶ್ವಾಸದಲ್ಲಿರುವುದಾಗಿ ಹೇಳಿದ್ದಾರೆ.

‘ಆರ್ಥಿಕ ಸಂಕಷ್ಟದ ಹೊರತಾಗಿಯೂ, ಭಾರತೀಯ ಉದ್ಯೋಗಿಗಳು ವೃತ್ತಿಪರ ಬೆಳವಣಿಗೆಗೆ ತಮ್ಮದಾದ ಸಾಮರ್ಥ್ಯಗಳನ್ನು ಅವಲಂಬಿಸಿದ್ದಾರೆ. ಭವಿಷ್ಯವು ಉಜ್ವಲವಾಗಿರುವಾಗ ವೃತ್ತಿಪರರು ತಮ್ಮ ಪ್ರೊಫೈಲ್‌ಗಳನ್ನು ವೃದ್ಧಿಸುವ ಮತ್ತು ವಿಭಿನ್ನ ಹುದ್ದೆಗಳಿಗೆ ಹೊಂದಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಬಹಳಷ್ಟು ಜನ ಮುಂದಾಲೋಚಿಸುತ್ತಾರೆ’ ಎಂದು ಲಿಂಕ್ಡ್‌ಇನ್ ವೃತ್ತಿ ತಜ್ಞ ನಿರಜಿತಾ ಬ್ಯಾನರ್ಜಿ ಹೇಳಿದ್ದಾರೆ.

ಸಮೀಕ್ಷೆಯಲ್ಲಿನ ಮೂವರಲ್ಲಿ ಒಬ್ಬರು (ಶೇಕಡ 32) ತಮ್ಮ ಸಾಮರ್ಥ್ಯದ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಮತ್ತು ಉತ್ತಮ ಹುದ್ದೆ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ ಎಂದು ಅವರು ಹೇಳಿದರು.

ಲಿಂಕ್ಡ್‌ಇನ್‌ನ ವರ್ಕ್‌ಫೋರ್ಸ್ ಕಾನ್ಫಿಡೆನ್ಸ್ ಇಂಡೆಕ್ಸ್‌ನ ಪ್ರಕಾರ, ಭಾರತದಲ್ಲಿ ಕೇವಲ ಐದರಲ್ಲಿ ಇಬ್ಬರು (ಶೇ 43) ವೃತ್ತಿಪರರು ಆರ್ಥಿಕ ಕುಸಿತಕ್ಕೆ ಸಿದ್ಧರಾಗಿದ್ದಾರೆ.

ಅರ್ಧಕ್ಕಿಂತ ಹೆಚ್ಚು (ಶೇ 54) ವೃತ್ತಿಪರರು ಸರಿಯಾದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದರ ಮೂಲಕ ಮತ್ತು ಹೆಚ್ಚಿನ ವ್ಯಾಪಾರಿ ಸಂಬಂಧಿತ ಕಾರ್ಯಕ್ರಮಗಳಿಗೆ ಹಾಜರಾಗುವ ಮೂಲಕ ತಮ್ಮ ನೆಟ್‌ವರ್ಕ್ ಅನ್ನು ಬೆಳೆಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT