ನಾವೆಲ್ಲ ಕಷ್ಟಪಟ್ಟು ಸಂಪಾದಿಸಿದ ಹಣ ಸುರಕ್ಷಿತವಾಗಿರಲಿ ಎಂದು ಬ್ಯಾಂಕ್ಗಳಲ್ಲಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್–ಎಫ್.ಡಿ) ರೂಪದಲ್ಲಿ ಅದನ್ನು ಇರಿಸುತ್ತೇವೆ. ಆದರೆ, ಹೆಚ್ಚಿನವರು ಮಾಡುವ ಒಂದು ತಪ್ಪು ಎಂದರೆ, ತಮ್ಮಲ್ಲಿರುವ ಅಷ್ಟೂ ಹಣವನ್ನು ದೀರ್ಘಾವಧಿಗೆ (ಉದಾಹರಣೆಗೆ 5 ಅಥವಾ 10 ವರ್ಷ) ಒಂದೇ ಎಫ್.ಡಿಯಲ್ಲಿ ಇರಿಸುವುದು. ಹೀಗೆ ಮಾಡುವುದರಿಂದ ನಿಮ್ಮ ಹಣದ ಮೇಲೆ ನಿಮಗೆ ನಿಯಂತ್ರಣ ಇರುವುದಿಲ್ಲ. ಹಣದ ತುರ್ತು ಅವಶ್ಯಕತೆ ಎದುರಾದರೆ ಅಥವಾ ಮಾರುಕಟ್ಟೆಯಲ್ಲಿ ಬಡ್ಡಿ ದರ ಹೆಚ್ಚಾದರೆ, ನೀವು ಹಳೆಯ ಕಡಿಮೆ ಬಡ್ಡಿ ದರಕ್ಕೇ ಅಂಟಿಕೊಳ್ಳಬೇಕಾಗುತ್ತದೆ. ಇಲ್ಲವೇ ಎಫ್.ಡಿ.ಯನ್ನು ಅವಧಿಗೆ ಮೊದಲೇ ಹಿಂಪಡೆದು ಅದಕ್ಕೆ ದಂಡ ಕಟ್ಟಬೇಕಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಅತ್ಯಂತ ಜಾಣತನದ ಪರಿಹಾರ ಎಫ್.ಡಿ ಲ್ಯಾಡರಿಂಗ್ ಅಥವಾ ಏಣಿ ಪದ್ಧತಿ.

ಸರಳವಾಗಿ ಹೇಳುವುದಾದರೆ, ಹೂಡಿಕೆಯ ಮೊತ್ತವನ್ನು ಒಂದೇ ಎಫ್.ಡಿ.ಯಲ್ಲಿ ಇರಿಸುವ ಬದಲು, ಅದನ್ನು ಸಣ್ಣ ಭಾಗಗಳನ್ನಾಗಿ ವಿಂಗಡಿಸಿ, ಬೇರೆ ಬೇರೆ ಅವಧಿಗಳಿಗೆ ಹೂಡಿಕೆ ಮಾಡುವುದೇ ಈ ಏಣಿ ಪದ್ಧತಿ. ಉದಾಹರಣೆಗೆ, ನಿಮ್ಮ ಬಳಿ ₹15 ಲಕ್ಷ ಇದೆ ಎಂದಿಟ್ಟುಕೊಳ್ಳಿ. ಇದನ್ನು ಸಂಪೂರ್ಣವಾಗಿ 5 ವರ್ಷಕ್ಕೆ ಒಂದೇ ಕಡೆ ಇರಿಸುವ ಬದಲು, ₹5 ಲಕ್ಷದ ಮೂರು ಭಾಗಗಳನ್ನಾಗಿ ಮಾಡಿ. ಮೊದಲ ₹5 ಲಕ್ಷವನ್ನು ಒಂದು ವರ್ಷಕ್ಕೆ, ಎರಡನೇ ₹5 ಲಕ್ಷವನ್ನು ಎರಡು ವರ್ಷಗಳಿಗೆ ಮತ್ತು ಮೂರನೇ ₹5 ಲಕ್ಷವನ್ನು ಮೂರು ವರ್ಷಗಳಿಗೆ ಹೂಡಿಕೆ ಮಾಡಿ. ಇಲ್ಲಿ ಒಂದೊಂದು ಹೂಡಿಕೆಯೂ ಏಣಿಯ ಒಂದೊಂದು ಮೆಟ್ಟಿಲಿನಂತೆ ಕೆಲಸ ಮಾಡುತ್ತದೆ. ಪ್ರತಿ ವರ್ಷವೂ ಒಂದು ಎಫ್.ಡಿ.ಯ ಅವಧಿ ಪೂರ್ಣಗೊಂಡು ನಿಮ್ಮ ಕೈಗೆ ಹಣ ಸಿಗುತ್ತಲೇ ಇರುತ್ತದೆ.

ಎಫ್.ಡಿ ಲ್ಯಾಡರಿಂಗ್ನಿಂದ ಆಗುವ ಅನುಕೂಲಗಳೇನು?

ಬಡ್ಡಿ ದರ ಏರಿಳಿತದ ಲಾಭ:

ಆರ್ಬಿಐ ಕಾಲಕಾಲಕ್ಕೆ ರೆಪೊ ದರ ಬದಲಾಯಿಸುತ್ತಿರುತ್ತದೆ. ನೀವು ಒಂದೇ ಬಾರಿ ದೀರ್ಘಾವಧಿಗೆ ನಿಶ್ಚಿತ ಠೇವಣಿ ಮಾಡಿದಾಗ, ಮುಂದಿನ ದಿನಗಳಲ್ಲಿ ಬಡ್ಡಿ ದರ ಹೆಚ್ಚಾದರೂ ಅದರ ಲಾಭ ಸಿಗುವುದಿಲ್ಲ. ಆದರೆ ಲ್ಯಾಡರಿಂಗ್ ಪದ್ಧತಿಯಲ್ಲಿ, ಪ್ರತಿ ವರ್ಷ ನಿಮ್ಮ ಒಂದು ಎಫ್.ಡಿ ಅವಧಿ ಪೂರ್ಣಗೊಳ್ಳುವುದರಿಂದ, ಆ ಹಣವನ್ನು ಅಂದಿನ ಬಡ್ಡಿ ದರಕ್ಕೆ ಮತ್ತೆ ಹೂಡಿಕೆ ಮಾಡುವ ಅವಕಾಶ ಇರುತ್ತದೆ. ಅಂದರೆ, ನೀವು ಮಾರುಕಟ್ಟೆಯ ಏರಿಳಿತದ ಜೊತೆಗೆ ನಿಮ್ಮ ಆದಾಯವನ್ನೂ ಹೆಚ್ಚಿಸುತ್ತ ಹೋಗಬಹುದು. ಇದು ನಿಮ್ಮ ಹಣದ ಮೌಲ್ಯವನ್ನು ಹಣದುಬ್ಬರಕ್ಕೆ (ಬೆಲೆ ಏರಿಕೆ) ತಕ್ಕಂತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ತುರ್ತು ಸಂದರ್ಭಗಳಲ್ಲಿ ದಂಡ ರಹಿತ ನಗದು ಲಭ್ಯತೆ:

ಹಣಕಾಸಿನ ಯೋಜನೆಗಳಲ್ಲಿ ನಗದು ಲಭ್ಯತೆ ಬಹಳ ಮುಖ್ಯ. ಜೀವನದಲ್ಲಿ ಯಾವಾಗ ಬೇಕಾದರೂ ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಅನಿವಾರ್ಯ ಖರ್ಚುಗಳು ಬರಬಹುದು. ಅಂತಹ ಸಮಯದಲ್ಲಿ ದೀರ್ಘಾವಧಿಯ ಎಫ್.ಡಿ.ಯನ್ನು ಮುರಿದರೆ ಬ್ಯಾಂಕ್ಗಳು ಶೇ 0.5ರಿಂದ ಶೇ 1ರವರೆಗೆ ದಂಡ ವಿಧಿಸುತ್ತವೆ. ಆದರೆ ಲ್ಯಾಡರಿಂಗ್ ಪದ್ಧತಿಯಲ್ಲಿ, ನೀವು ಹೂಡಿಕೆಯನ್ನು ಹಂಚಿರುವುದರಿಂದ, ಪ್ರತಿ ವರ್ಷ ಸಿಗುವ ಹಣವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಉಳಿದ ಎಫ್.ಡಿ.ಗಳು ಹಾಗೆಯೇ ಮುಂದುವರಿಯುವುದರಿಂದ ನಿಮ್ಮ ಒಟ್ಟಾರೆ ಹೂಡಿಕೆಗೆ ಧಕ್ಕೆ ಆಗುವುದಿಲ್ಲ.

ದುಪ್ಪಟ್ಟು ಸುರಕ್ಷತೆ:

ಭಾರತದಲ್ಲಿ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ನಿಯಮದಂತೆ, ಒಂದು ಬ್ಯಾಂಕ್ನಲ್ಲಿ ಒಬ್ಬ ವ್ಯಕ್ತಿಯ ₹5 ಲಕ್ಷದವರೆಗಿನ ಠೇವಣಿಗೆ ಮಾತ್ರ ವಿಮೆ ಇರುತ್ತದೆ. ನೀವು ಲ್ಯಾಡರಿಂಗ್ ಮಾಡುವಾಗ, ನಿಮ್ಮ ₹15 ಲಕ್ಷವನ್ನು ಒಂದೇ ಬ್ಯಾಂಕ್ನಲ್ಲಿ ಇಡುವ ಬದಲು ಮೂರು ಭಿನ್ನ ಬ್ಯಾಂಕ್ಗಳಲ್ಲಿ (ಉದಾಹರಣೆಗೆ ಒಂದು ಎಸ್ಬಿಐ, ಒಂದು ಎಚ್ಡಿಎಫ್ಸಿ ಮತ್ತು ಒಂದು ಐಸಿಐಸಿಐ) ಹಂಚಿ ಹೂಡಿಕೆ ಮಾಡಿದರೆ, ನಿಮ್ಮ ಇಡೀ ₹15 ಲಕ್ಷ ಮೊತ್ತವು ವಿಮಾ ವ್ಯಾಪ್ತಿಗೆ ಬರುತ್ತದೆ. ಇದು ಅಸಲು ಹಣಕ್ಕೂ ಗರಿಷ್ಠ ಭದ್ರತೆ ಒದಗಿಸುತ್ತದೆ.

ಈ ವಿಷಯ ಮರೆಯದಿರಿ:

ಈ ಪದ್ಧತಿಯನ್ನು ಅನುಸರಿಸುವಾಗ ನೀವು ಕೆಲವು ವಿಷಯಗಳನ್ನು ಗಮನದಲ್ಲಿಡಬೇಕು.

ಈ ಬಗೆಯ ಎಫ್.ಡಿ ಬೇಡ:

ಎಫ್.ಡಿ ಮಾಡುವಾಗ ಸ್ವಯಂಚಾಲಿತ ನವೀಕರಣ (ಆಟೊ ರಿನೀವಲ್) ಆಯ್ಕೆ ಆರಿಸಬೇಡಿ. ಪ್ರತಿ ಬಾರಿ ಎಫ್.ಡಿ ಅವಧಿ ಪೂರ್ಣಗೊಂಡಾಗ ಮಾರುಕಟ್ಟೆಯನ್ನು ಗಮನಿಸಿ, ಯಾವ ಬ್ಯಾಂಕ್ ಅಥವಾ ಯಾವ ಯೋಜನೆ ಹೆಚ್ಚು ಬಡ್ಡಿ ನೀಡುತ್ತದೆಯೋ ಅಲ್ಲಿಗೆ ಹಣ ವರ್ಗಾಯಿಸಿ. ಎರಡನೆಯದಾಗಿ, 80ಸಿ ಅಡಿಯಲ್ಲಿ ತೆರಿಗೆ ಉಳಿಸಲು ಇರುವ ಎಫ್.ಡಿಗಳು 5 ವರ್ಷ ಲಾಕ್ ಆಗಿರುತ್ತವೆ. ಅವುಗಳನ್ನು ಈ ಪದ್ಧತಿಗೆ ಬಳಸಬೇಡಿ. ಬದಲಾಗಿ ಸಾಮಾನ್ಯ ಎಫ್.ಡಿಗಳನ್ನೇ ಬಳಸಿ. ಡಿಜಿಟಲ್ ಬ್ಯಾಂಕಿಂಗ್ ಮೂಲಕ ಮನೆಯಲ್ಲೇ ಕುಳಿತು ನಿಮಿಷಗಳಲ್ಲಿ ಇಂತಹ ಹೂಡಿಕೆಗಳನ್ನು ನಿರ್ವಹಿಸಬಹುದು.

ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ:

ಸಾಮಾನ್ಯವಾಗಿ ಬ್ಯಾಂಕ್ಗಳು ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ) ಸಾಮಾನ್ಯ ದರಕ್ಕಿಂತ ಶೇ 0.50ರಷ್ಟು ಹೆಚ್ಚಿನ ಬಡ್ಡಿ ನೀಡುತ್ತವೆ. ಹಿರಿಯರ ನಾಗರಿಕರು ಕೂಡ ಲ್ಯಾಡರಿಂಗ್ ಪದ್ಧತಿಯನ್ನು ಅನುಸರಿಸಬಹುದು. ಕೆಲವು ಬ್ಯಾಂಕ್ಗಳು ಅತಿ ಹಿರಿಯ ನಾಗರಿಕರಿಗೆ (80 ವರ್ಷ ಮೇಲ್ಪಟ್ಟವರು) ಇನ್ನೂ ಹೆಚ್ಚಿನ ಬಡ್ಡಿ ನೀಡುತ್ತವೆ, ಇದನ್ನು ಗಮನಿಸುವುದು ಉತ್ತಮ.

ತೆರಿಗೆ ಮತ್ತು ಟಿಡಿಎಸ್:

ಎಫ್.ಡಿ ಮೇಲಿನ ಬಡ್ಡಿಯು ನಿಮ್ಮ ಒಟ್ಟು ಆದಾಯಕ್ಕೆ ಸೇರುತ್ತದೆ ಮತ್ತು ನಿಮ್ಮ ತೆರಿಗೆ ಹಂತಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ಎಫ್.ಡಿ ಬಡ್ಡಿಯು ₹40 ಸಾವಿರ (ಹಿರಿಯ ನಾಗರಿಕರಿಗೆ ₹50 ಸಾವಿರ) ಮೀರಿದರೆ ಬ್ಯಾಂಕ್ಗಳು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಮಾಡುತ್ತವೆ. ನಿಮ್ಮ ಆದಾಯವು ತೆರಿಗೆ ಮಿತಿಗಿಂತ ಕಡಿಮೆ ಇದ್ದರೆ, ಬ್ಯಾಂಕ್ಗೆ ನಮೂನೆ 15ಜಿ ಅಥವಾ 15ಎಚ್ ಸಲ್ಲಿಸುವ ಮೂಲಕ ಟಿಡಿಎಸ್ ಕಡಿತವಾಗದಂತೆ ತಡೆಯಬಹುದು.

ಸಣ್ಣ ಹಣಕಾಸು ಬ್ಯಾಂಕ್ಗಳ ಬಳಕೆ:

ಹೆಚ್ಚಿನ ಸುರಕ್ಷತೆಗಾಗಿ ದೊಡ್ಡ ಬ್ಯಾಂಕ್ಗಳನ್ನು ಆರಿಸುವುದು ಒಳ್ಳೆಯದು. ಆದರೆ, ಆರ್ಬಿಐ ಅಡಿಯಲ್ಲಿ ನೋಂದಾಯಿತವಾಗಿರುವ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗಳು (ಕಿರು ಹಣಕಾಸು ಬ್ಯಾಂಕ್ಗಳು) ದೊಡ್ಡ ಬ್ಯಾಂಕ್ಗಳಿಗಿಂತ ಶೇ 1ರಿಂದ ಶೇ 2ರಷ್ಟು ಹೆಚ್ಚಿನ ಬಡ್ಡಿ ನೀಡುವುದಿದೆ. ಇಲ್ಲೂ ಕೂಡ ₹5 ಲಕ್ಷದವರೆಗಿನ ನಿಮ್ಮ ಠೇವಣಿಗೆ ಡಿಐಸಿಜಿಸಿ ವಿಮೆ ಇರುವುದರಿಂದ, ನಿಮ್ಮ ಹೂಡಿಕೆಯ ಒಂದು ಭಾಗವನ್ನು ಇಂತಹ ಬ್ಯಾಂಕ್ಗಳಲ್ಲಿರಿಸಿ ಲಾಭ ಹೆಚ್ಚಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.