ಆರೋಗ್ಯ ವಿಮೆಯ ವರ್ಗಾವಣೆ ಅಂದರೇನು?
ಆರೋಗ್ಯ ವಿಮಾ ಪಾಲಿಸಿಯನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ವರ್ಗಾವಣೆ ಮಾಡಿಕೊಳ್ಳುವ ಅವಕಾಶವನ್ನು ಐಆರ್‌ಡಿಎಐ ನೀಡಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳುವವರು ತಾವು ಅದಾಗಲೇ ಒಗ್ಗೂಡಿಸಿಕೊಂಡಿರುವ ವಿವಿಧ ಅನುಕೂಲಗಳನ್ನು ಬಿಟ್ಟುಕೊಡದೆ, ಇನ್ನೊಂದು ಕಂಪನಿಯ ಪಾಲಿಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಂದರೆ, ಆರೋಗ್ಯ ವಿಮಾ ಪಾಲಿಸಿಯನ್ನು ವರ್ಗಾಯಿಸಿಕೊಳ್ಳುವ ಅವಕಾಶ ಬಳಸಿಕೊಳ್ಳುವವರು ತಾವು ಒಗ್ಗೂಡಿಸಿಕೊಂಡಿರುವ ‘ನೋ ಕ್ಲೇಮ್ ಬೋನಸ್’ (ಎನ್‌ಸಿಬಿ) ಕಳೆದುಕೊಳ್ಳಬೇಕಾಗಿಲ್ಲ. ಇನ್ನೊಂದು ಕಂಪನಿಗೆ ಪಾಲಿಸಿ ವರ್ಗಾವಣೆ ಮಾಡಿಕೊಂಡಾಗ ಹೊಸದಾಗಿ ‘ಕಾಯುವಿಕೆ ಅವಧಿ’ ಇರುವುದಿಲ್ಲ.