ಹೆಸರು ಬೇಡ, ಮಂಡ್ಯ

l ಪ್ರಶ್ನೆ: ನಾನು ಸರ್ಕಾರಿ ನೌಕರಿಯಿಂದ ನಿವೃತ್ತನಾಗಿದ್ದೇನೆ. ನನ್ನಿಂದ ಎರಡು ಪ್ರಶ್ನೆಗಳಿವೆ 1) 2001ರಲ್ಲಿ ₹ 20 ಸಾವಿರ ಕೊಟ್ಟು 30X40 ಅಳತೆಯ ನಿವೇಶನ ಕೊಂಡಿದ್ದು, ಅದನ್ನು 2020ರ ಏಪ್ರಿಲ್‌ನಲ್ಲಿ ₹ 20 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಈ ಹಣದಿಂದ ನಾನು, ನನ್ನ ಹೆಂಡತಿ ಹೆಸರಿನಲ್ಲಿ ಇನ್ನೊಂದು ನಿವೇಶನ ಕೊಂಡರೆ, ಬಂಡವಾಳ ವೃದ್ಧಿ ತೆರಿಗೆ ಉಳಿಸಬಹುದೇ? 2) 2016ರಲ್ಲಿ ನಾನು ನನ್ನ ಮಗಳ ಹೆಸರಿನಲ್ಲಿ ಎಲ್‌ಐಸಿಯ ಒಂದು ವಿಮೆ ತೆಗೆಸಿದ್ದೆ. ಅವಳ ಮದುವೆ 2018ರಲ್ಲಿ ಆಗಿದೆ. ಈವರೆಗೆ ಪಾಲಿಸಿಯ ಪ್ರೀಮಿಯಂ ಹಣ ಕಟ್ಟದಿರುವುದು ಈಗ ತಿಳಿದುಬಂತು. ಕಟ್ಟದ ಹಣ ಎಲ್‌ಐಸಿಯವರು ತುಂಬಿಸಿಕೊಳ್ಳುತ್ತಾರಂತೆ. ನಾನು ಈ ಹಣ ತುಂಬಿ, ಮಗಳ ಹೆಸರಿನಲ್ಲಿ ಎಫ್‌ಡಿ ಮಾಡಿ ಬರುವ ಬಡ್ಡಿಯಿಂದ ಮುಂದಿನ ಪ್ರೀಮಿಯಂ ಹಣ ತುಂಬಲು ಹೇಳಬೇಕೆಂದಿದ್ದೇನೆ. ದಯಮಾಡಿ ಅಭಿಪ್ರಾಯ ತಿಳಿಸಿ.

ಉತ್ತರ: ನಿಮ್ಮ ಮೊದಲ ಪ್ರಶ್ನೆಗೆ ಸಂಬಂಧಿಸಿದಂತೆ: ಬಂಡವಾಳ ವೃದ್ಧಿ ತೆರಿಗೆ ಉಳಿಸಲು ಎನ್‌ಎಚ್‌ಎಐ ಅಥವಾ ರೂರಲ್ ಎಲೆಕ್ಟ್ರಿಫಿಕೇಷನ್ ಬಾಂಡ್‌ಗಳಲ್ಲಿ ಹಣ ತೊಡಗಿಸಬಹುದು. ಮಾರಾಟ ಮಾಡಿ ಬಂದ ಹಣದಿಂದ ಇನ್ನೊಂದು ನಿವೇಶನ ಕೊಂಡು ಮನೆ ಕಟ್ಟಿಸಬಹುದು. ನೀವು ಬಯಸಿದಂತೆ ಬರೇ ನಿವೇಶನ ಕೊಳ್ಳಲಾಗದು ಹಾಗೂ ನಿವೇಶನ ಮತ್ತು ಮನೆ ನಿಮ್ಮ ಹೆಸರಿನಲ್ಲಿಯೇ ಆಗಬೇಕು. ನಿಮ್ಮ ಪ್ರಶ್ನೆ ಸಂಖ್ಯೆ ಎರಡರಲ್ಲಿ ನೀವು ತಿಳಿಸಿದ ಮಾರ್ಗದಂತೆ, ಈಗ ಬಾಕಿ ಹಣ ತುಂಬಿ, ಮುಂದೆ ಬರುವ ಪ್ರೀಮಿಯಂಗಾಗಿ ಮಗಳ ಹೆಸರಿನಲ್ಲಿ ಎಫ್.ಡಿ. ಮಾಡುವುದರಿಂದ ನಿಮ್ಮ ಉದ್ದೇಶ ಸಫಲವಾಗದೇ ಇರಬಹುದು. ಒಮ್ಮೆ ನೀವು ಮಗಳ ಹೆಸರಿನಲ್ಲಿ ಎಫ್.ಡಿ. ಮಾಡಿದರೆ ಆ ಹಣ ಸಂಪೂರ್ಣವಾಗಿ ಮಗಳಿಗೆ ಸೇರುತ್ತದೆ. ಮಗಳು–ಅಳಿಯ ಹಣವನ್ನು ಯಾವುದಾದರೊಂದು ಖರ್ಚಿಗೆ ಅವಧಿಮುನ್ನ ಪಡೆದರೆ ನಿಮ್ಮ ಉದ್ದೇಶ ನೆರವೇರದು. ಇದರ ಬದಲಾಗಿ ಎಫ್.ಡಿ.ಯನ್ನು ನಿಮ್ಮ ಹೆಸರಿಗೆ ಮಾಡಿ, ಕಾಲಕಾಲಕ್ಕೆ ಬಡ್ಡಿಯಿಂದ ಪ್ರಿಮಿಯಂ ಹಣ ತುಂಬುತ್ತಾ ಬನ್ನಿ ಹಾಗೂ ಎಫ್.ಡಿ.ಗೆ ನಿಮ್ಮ ಮಗಳ ಹೆಸರಿನಲ್ಲಿ ನಾಮನಿರ್ದೇಶನ ಮಾಡಿರಿ. ಇದರಿಂದ ನಿಮ್ಮ ಸದುದ್ದೇಶ ಸಫಲವಾಗುತ್ತದೆ. ಜೊತೆಗೆ ಮಗಳಿಗೆ ನಿಮ್ಮ ನಂತರ ಎಫ್.ಡಿ. ಹಣ ಕೂಡಾ ದೊರೆಯುತ್ತದೆ.

ರಾಮಚಂದ್ರರಾವ್ (ಹೆಸರು ಬದಲಾಯಿಸಿದೆ), ದಾವಣಗೆರೆ

l ಪ್ರಶ್ನೆ: ನನ್ನ ವಯಸ್ಸು 87 ವರ್ಷ. ನನ್ನ ಇಡೀ ಜೀವನದ ಉಳಿತಾಯವನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿ ನವೀಕರಿಸುತ್ತಾ ಬಂದಿದ್ದೇನೆ. ಒಟ್ಟು ಮೊತ್ತ ಹಲವು ಲಕ್ಷಗಳಾಗಿದ್ದು, ಬ್ಯಾಂಕ್‌ನವರು ಮರುಪಾವತಿಸಲಿದ್ದಾರೆ. ಇನ್ನು ಮುಂದೆ ನವೀಕರಿಸುವುದಿಲ್ಲ. ಈ ಮೊತ್ತ ನನ್ನ ಕುಟುಂಬದ ಸದಸ್ಯರಿಗೆ ವಿತರಿಸಲು ನಿರ್ಧರಿಸಿದ್ದೇವೆ. 1) ನಗದು ರೂಪದಲ್ಲಿ ನೀಡಬಹುದೇ? 2) ಅವರವರ ಉಳಿತಾಯ ಖಾತೆಗೆ ಜಮಾ ಮಾಡಬಹುದೇ? ಎರಡರಲ್ಲಿ ಯಾವುದು ಸೂಕ್ತ? ಮುಂದೆ ಆದಾಯ ತೆರಿಗೆ ಕಚೇರಿಯಿಂದ ಯಾರಿಗೂ ತೊಂದರೆಯಾಗಬಾರದು.

ಉತ್ತರ: ನೀವು ಈವರೆಗೆ ಮಾಡಿರುವ ಉಳಿತಾಯವನ್ನು ನಿಮ್ಮ ಕುಟುಂಬದವರಿಗೆ ಹಂಚಲು ನಿರ್ಧಾರಮಾಡಿದ್ದು, ಯಾರಿಗೆ ಎಷ್ಟು ಹಣ ಎನ್ನುವುದನ್ನು ನಿರ್ಧರಿಸಿದ ನಂತರ ಅವರವರ ಹೆಸರಿನಲ್ಲಿ Account payee ಕ್ರಾಸ್ ಚೆಕ್ ಮುಖಾಂತರ ಹಣ ವರ್ಗಾಯಿಸಿರಿ. ಹೀಗೆ ಮಾಡುವ ಮುನ್ನ ಚೆಕ್‌ನ ಜೆರಾಕ್ಸ್ ಪ್ರತಿ ಪಡೆದು ಪ್ರತಿಯೊಬ್ಬರಿಗೂ ಇಟ್ಟುಕೊಳ್ಳುವಂತೆ ತಿಳಿಸಿರಿ. ಹಣ ಪಡೆದವರು ಈ ಹಣ ಎಲ್ಲಿಂದ ಬಂದಿದೆ ಎಂಬುದನ್ನು ಐ.ಟಿ. ಅಥವಾ ಯಾರಾದರೂ ಕೇಳಿದಾಗ ಪುರಾವೆಯಾಗಿ ತೋರಿಸಲು ಅನುಕೂಲವಾಗುತ್ತದೆ. ನಗದು ರೂಪದಲ್ಲಿ ಎಂದಿಗೂ ಕೊಡಬೇಡಿ. ಅದೇ ರೀತಿ ಅವರವರ ಖಾತೆಗೂ ನಗದು ಜಮಾ ಮಾಡದಿರಿ. ರಕ್ತ ಸಂಬಂಧಿಗಳಲ್ಲಿ ಈ ರೀತಿ ಹಣ ವರ್ಗಾವಣೆ ದಾನ ಎಂದು ಪರಿಗಣಿಸಲಾಗುತ್ತದೆ. ಕೊಟ್ಟವರು, ಹಣ ಪಡೆದ ವ್ಯಕ್ತಿಗಳು, ಆದಾಯ ತೆರಿಗೆ ಅಥವಾ ಇನ್ನಿತರ ತೆರಿಗೆ ಕೊಡುವ ಅವಶ್ಯವಿಲ್ಲ. ನಿಮ್ಮ ಪ್ರಶ್ನೆಯಿಂದ ಹಲವರಿಗೆ ಉತ್ತರ ಸಿಕ್ಕಿದಂತಾಗಿದೆ, ಧನ್ಯವಾದಗಳು.

ಚಂದ್ರಶೇಖರ್ (ಹೆಸರು ಬದಲಾಯಿಸಿದೆ) ರಾಯಚೂರು

l ಪ್ರಶ್ನೆ: ನಾನು ಹಲವು ವರ್ಷಗಳಿಂದ ನಿಮ್ಮ ಅಂಕಣ ಓದುತ್ತ ಬಂದಿದ್ದೇನೆ. ನಿಮ್ಮ ಅಂಕಣದಿಂದ ಪ್ರಭಾವಿತನಾಗಿ ಉಳಿತಾಯದ ಜೊತೆಗೆ ಮನೆ ಕಟ್ಟಿಸಿ ಹೆಣ್ಣು ಮಕ್ಕಳ ಮದುವೆ ಕೂಡಾ ಮಾಡಿದೆ. ನನ್ನ ಪ್ರಶ್ನೆ; ನಾನು ಈಗ ನಿವೃತ್ತ ಶಿಕ್ಷಕ. ನನಗೆ 4 ಜನ ಮಕ್ಕಳು. 3 ಹೆಣ್ಣು, 1 ಗಂಡು. ಮೊದಲಿಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಅವರು ಸರ್ಕಾರಿ ನೌಕರಿಯಲ್ಲಿದ್ದಾರೆ. ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಮಗ ಹಾಗೂ ಕೊನೆಯ ಮಗಳು ವಿದ್ಯಾವಂತರಾಗಿ ಕೆಲಸಕ್ಕೆ ಹೋಗದೆ ನಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಹಳ ತೊಂದರೆ ಕೊಡುತ್ತಾರೆ. ನಾನು 30X45 ನಿವೇಶನದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದೇನೆ. ಈಗ ನನ್ನ ಮನೆಯನ್ನು ನನ್ನ ಹಿರಿಯ ಹಾಗೂ ಎರಡನೇ ಮಗಳಿಗೆ ದಾನಪತ್ರ ಬರೆಯಬೇಕೆಂದಿದ್ದೇನೆ. ನಾನು, ನನ್ನ ಹೆಂಡತಿಯ ಮರಣದ ನಂತರ ಮಗ ಮತ್ತು ಮೂರನೆಯ ಮಗಳಿಂದ, ದಾನ ಪತ್ರ ಪಡೆದ ಮಕ್ಕಳಿಗೆ ತೊಂದರೆಯಾಗಬಹುದೇ? ಇದಕ್ಕೇನಾದರೂ ಉಪಾಯ ಇದ್ದರೆ ತಿಳಿಸಿ.

ಉತ್ತರ: ನಿಮ್ಮ ದುಡಿಮೆಯಿಂದ ಕಟ್ಟಿಸಿದ ಮನೆ ಸ್ವಯಾರ್ಜಿತವಾಗುತ್ತದೆ. ಈ ಸ್ಥಿರ ಆಸ್ತಿ ವಿಚಾರದಲ್ಲಿ ನೀವು ದಾನಪತ್ರ (Gift deed) ಅಥವಾ ಉಯಿಲು (Will) ಯಾರ ಹೆಸರಿನಲ್ಲಿಯಾದರೂ ಬರೆಯುವ ಅಧಿಕಾರ ನಿಮಗಿರುತ್ತದೆ. ನೀವು ಬಯಸಿದಂತೆ ನಿಮ್ಮ ಹಿರಿಯ ಹಾಗೂ ಎರಡನೇ ಮಗಳಿಗೆ ನಿಮ್ಮ ದುಡಿಮೆಯಿಂದ ಕಟ್ಟಿಸಿದ ಮನೆ ದಾನಪತ್ರ ಮುಖಾಂತರ ವರ್ಗಾಯಿಸಿದಲ್ಲಿ ಉಳಿದ ಮಕ್ಕಳು ತಕಾರರು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ದಾನಪತ್ರ, ಕ್ರಯ ಪತ್ರಕ್ಕೆ ಸಮನಾಗಿದ್ದು, ದಾನ ಪತ್ರ ಮಾಡಿದ ತಾರೀಖಿನಿಂದ ಆ ಮನೆಯ ಮೇಲೆ ನಿಮಗೆ ಯಾವುದೇ ಹಕ್ಕು ಉಳಿಯುವುದಿಲ್ಲ.

ದಾನ ಪತ್ರ ಮಾಡಿದ ತಾರೀಕಿನಿಂದಲೇ ಸ್ಥಿರ ಆಸ್ತಿ ಖಾತೆ ದಾನ ಪಡೆದ ವ್ಯಕ್ತಿಗಳ ಹೆಸರಿನಲ್ಲಿ ವರ್ಗಾಯಿಸಲಾಗುತ್ತದೆ. ದಾನ ಪಡೆದ ಮಕ್ಕಳು ನಿಮ್ಮನ್ನು ಹಾಗೂ ನಿಮ್ಮ ಹೆಂಡತಿಯನ್ನು ಕೊನೆಯತನಕ ನೋಡಿಕೊಳ್ಳುವ ಭರವಸೆ ಇದ್ದರೆ ಮಾತ್ರ ದಾನಪತ್ರ ಬರೆಯಿರಿ. ಇದೇ ವೇಳೆ ನಿಮ್ಮ ಮನೆಯನ್ನು ನಿಮ್ಮಿಬ್ಬರ ಹೆಸರಿನಲ್ಲಿ ಜೀವಿತಕಾಲದವರೆಗೆ ಉಳಿಸಿಕೊಳ್ಳಲು, ನೀವು ಬಯಸುವ ಮಕ್ಕಳ ಹೆಸರಿನಲ್ಲಿ ಉಯಿಲು ಬರೆಯಬಹುದು. ಉಯಿಲು ಬರೆಯುವುದಾದಲ್ಲಿ ಆಸ್ತಿ ನಿಮ್ಮ ನಂತರ ನಿಮ್ಮ ಹೆಂಡತಿಗೆ ಹಾಗೂ ಹೆಂಡತಿ ನಂತರ ನೀವು ಬಯಸುವ ಮಕ್ಕಳಿಗೆ ಬರೆಯಬಹುದಾಗಿದೆ. ಇದರಿಂದ ನೀವು ಗಂಡ–ಹೆಂಡತಿ ನಿಮ್ಮ ಜೀವಿತ ಕಾಲದವರೆಗೆ ಆಸ್ತಿಯನ್ನು ನಿಮ್ಮ ಹೆಸರಿಗೆ ಇರಿಸಿಕೊಂಡಂತಾಗುತ್ತದೆ. ಹೆಚ್ಚಿನ ಮಾಹಿತಿಗೆ 94480 15300ಗೆ ಕರೆ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.