ನಾನು ಹೂಡಿಕೆಯ ಕ್ಷೇತ್ರಕ್ಕೆ ಹೊಸಬ. ಬಂಗಾರ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಲಾಭ ನೀಡುತ್ತಿದೆ. ಹಿಂದೆ ಗೋಲ್ಡ್ ಬಾಂಡ್ ಆರಂಭಿಸಿದ್ದಾಗ ನಾನು ಖರೀದಿಸಿದ್ದೆ. ಈ ಹೂಡಿಕೆಯಿಂದ ನನಗೆ ಸಾಕಷ್ಟು ಲಾಭ ಆಗಿದೆ. ಆದರೆ ಈತ್ತೀಚಿನ ಕೆಲವು ವರ್ಷಗಳಿಂದ ಇದನ್ನು ನಿಲ್ಲಿಸಲಾಗಿದೆ. ಹೀಗಾಗಿ, ನೇರ ಚಿನ್ನ ಖರೀದಿಗಿಂತ ಅದೇ ಕ್ಷೇತ್ರದ ಯಾವುದಾದರೂ ಕಂಪನಿಯ ಷೇರು, ಡಿಜಿಟಲ್ ಗೋಲ್ಡ್, ಗೋಲ್ಡ್ ಫಂಡ್, ಇಟಿಎಫ್ ಖರೀದಿ ಮಾಡಿ ಅದೇ ರೀತಿಯ ಲಾಭ ಗಳಿಸಬಹುದೇ?