ಹೆಸರು ತಿಳಿಸಿಲ್ಲ, ನೆಲಮಂಗಲ, ಬೆಂಗಳೂರು

ಪ್ರಶ್ನೆ: ನಾನು ಈ ಹಿಂದೆ ಖರೀದಿಸಿದ್ದ ಷೇರುಗಳನ್ನು ಇತ್ತೀಚೆಗೆ ಮಾರಾಟ ಮಾಡಿದೆ. ಬಂದ ಹಣವನ್ನು ಆನ್ಲೈನ್ ವ್ಯವಹಾರಗಳಲ್ಲಿ ತೊಡಗಿಸಿದೆ. ಆದರೆ ಈಗ ಈ ವ್ಯವಹಾರ ನಷ್ಟದ್ದೆಂದು ಕಂಡುಬರುತ್ತಿದೆ. ಈಗ ನನ್ನ ಸಂಪೂರ್ಣ ಅಸಲು ಸಿಗುವ ವಿಶ್ವಾಸವಿಲ್ಲ. ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ದೂರು ದಾಖಲಿಸುವ ಬಗ್ಗೆ ಕಾನೂನು ನೆರವು ಕೋರಿದ್ದೇನೆ. ಒಂದೆಡೆ ನನ್ನ ಅಸಲು ಅಥವಾ ಉಳಿತಾಯ ಮಾಡಿದ ಮೊತ್ತ ನಷ್ಟವಾಗಿದೆ. ಆದರೆ ಷೇರು ಮಾರಾಟದಿಂದ ಬಂದ ಲಾಭಕ್ಕೆ ತೆರಿಗೆ ಕಟ್ಟಬೇಕಾಗಿದೆ. ನಿಜವಾಗಿ ಇದರ ಅಗತ್ಯ ಇದೆಯೇ? ಯಾವುದಾದರೂ ರೀತಿಯಲ್ಲಿ ಅಸಲು ಮೊತ್ತ ಕಳೆದುಕೊಂಡ ಕಾರಣ, ಬಂದ ಲಾಭವನ್ನು ಅದರೊಡನೆ ವಜಾ ಮಾಡಲು ಹಾಗೂ ಮುಂದಿನ ವರ್ಷಕ್ಕೆ ಮುಂದೂಡಲು ಸಾಧ್ಯ ಇಲ್ಲವೇ?

ಉತ್ತರ: ನಿಮ್ಮ ಪ್ರಶ್ನೆ ಕಾನೂನು ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ನೀವು ಹಿಂದೆ ಷೇರುಗಳಲ್ಲಿ ಹೂಡಿಕೆ ಮಾಡಿ ಬಂದ ಒಟ್ಟು ಮೊತ್ತವನ್ನು ಆನ್ಲೈನ್ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದೀರಿ ಎಂದು ಸ್ಪಷ್ಟಪಡಿಸಿದ್ದೀರಿ. ಆದರೆ ಪ್ರಸ್ತುತ ಆ ವ್ಯವಹಾರ ನಷ್ಟದಲ್ಲಿದ್ದು, ಅಸಲು ಕೂಡ ಸಂಪೂರ್ಣವಾಗಿ ವಾಪಸ್ಸಾಗುವ ವಿಶ್ವಾಸವಿಲ್ಲ ಎಂದು ತಿಳಿಸಿದ್ದೀರಿ. ಇದು ವಿಷಾದಕರ ಸಂಗತಿ. ಆರ್ಥಿಕ ಅಪರಾಧಗಳ ಬಗ್ಗೆ ಎಲ್ಲರೂ ಜಾಗೃತರಾಗಿ ಇರಬೇಕು. ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸುವುದನ್ನು ನೀವು ಪರಿಗಣಿಸಿರುವುದು ಸರಿಯಾದ ಕ್ರಮ. ಆದರೆ ತೆರಿಗೆ ವಿಷಯದಲ್ಲಿ ಕಾನೂನು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಬೇಕು.

ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ನೀವು ಷೇರುಗಳನ್ನು ಮಾರಾಟ ಮಾಡಿದ ಸಮಯದಲ್ಲಿ ಲಭಿಸಿದ ಲಾಭವು ತೆರಿಗೆಗೆ ಒಳಪಡುವ ಆದಾಯವಾಗುತ್ತದೆ. ನಂತರ ಆ ಹಣವನ್ನು ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸಿದ್ದೀರಿ ಎಂಬ ಕಾರಣಕ್ಕೆ, ಮೊದಲ ವ್ಯವಹಾರದಲ್ಲಿ ಉಂಟಾದ ಲಾಭದ ಮೇಲಿನ ತೆರಿಗೆ ಬಾಧ್ಯತೆ ಕಾನೂನಿನ ಪರಿಧಿಯಲ್ಲಿ ರದ್ದು ಆಗುವುದಿಲ್ಲ. ಅಂದರೆ, ಷೇರು ಮಾರಾಟದಿಂದ ದೊರೆತ ಬಂಡವಾಳ ವೃದ್ಧಿಯನ್ನು ಅದೇ ವರ್ಷದ ಆದಾಯವಾಗಿ ಪರಿಗಣಿಸಲಾಗುತ್ತದೆ ಮತ್ತು ನಿಯಮಾನುಸಾರ ತೆರಿಗೆ ಪಾವತಿಸಬೇಕಾಗುತ್ತದೆ. ಯಾವುದಾದರೂ ತೆರಿಗೆ ವಿನಾಯಿತಿ ಇದ್ದರೆ (ಉದಾಹರಣೆಗೆ, ದೀರ್ಘಾವಧಿ ಬಂಡವಾಳ ಲಾಭ ₹1.25 ಲಕ್ಷದ ತನಕ ವಿನಾಯಿತಿಗೆ ಒಳಪಡುತ್ತದೆ) ಅದನ್ನು ಪಡೆದುಕೊಳ್ಳಬಹುದು. ನಂತರದ ಹಂತದಲ್ಲಿ ಆಗುವ ಲಾಭ-ನಷ್ಟವನ್ನು, ತೆರಿಗೆ ಕಾಯ್ದೆಯ ವ್ಯಾಪ್ತಿಯ ಅಡಿ ಪರಿಗಣಿಸುವ ಅವಕಾಶ ಇಲ್ಲ. ಅದು ಪ್ರತ್ಯೇಕ ವಿಚಾರವಾಗುತ್ತದೆ. ಅದಕ್ಕೂ ನಿಮ್ಮ ಮೂಲ ಹೂಡಿಕೆಗೂ ಯಾವುದೇ ಸಂಬಂಧವಿಲ್ಲ.

ನೀವು ಅನುಭವಿಸಿದ ನಷ್ಟವು ನಿರ್ದಿಷ್ಟ ವ್ಯಾಪಾರ-ವ್ಯವಹಾರಗಳಿಂದ ಆಗಿದ್ದಿದ್ದರೆ, ಅದನ್ನು ಅದೇ ವರ್ಷದ ಅಥವಾ ಮುಂದಿನ ವರ್ಷಗಳ ಲಾಭದೊಡನೆ ವಜಾ ಮಾಡಿಕೊಳ್ಳಲು ಮತ್ತು ಕೆಲವು ಸಂದರ್ಭಗಳಲ್ಲಿ ಮುಂದೂಡಲು ಅವಕಾಶವಿದೆ. ಆದರೆ ಆನ್ಲೈನ್ ವ್ಯವಹಾರಗಳು ವಂಚನೆ, ಅಕ್ರಮ ಹೂಡಿಕೆ ಅಥವಾ ಮಾನ್ಯವಲ್ಲದ ಸ್ಕೀಂಗಳಿಗೆ ಸಂಬಂಧಪಟ್ಟಿದ್ದರೆ, ಆ ನಷ್ಟವನ್ನು ತೆರಿಗೆ ಲೆಕ್ಕದಲ್ಲಿ ಸರಿದೂಗಿಸಲು ಅವಕಾಶ ಇಲ್ಲ. ಮಾರಾಟ ಮಾಡಿದ ಷೇರುಗಳಿಗೆ ಸಮರ್ಪಕವಾಗಿ ತೆರಿಗೆ ಲೆಕ್ಕ ಹಾಕಲು ತೆರಿಗೆ ಸಲಹೆ ಪಡೆದುಕೊಳ್ಳಿ ಹಾಗೂ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಗಮನಹರಿಸಿ. ಇಂತಹ ವಿಚಾರದಲ್ಲಿ ನಮ್ಮ ಹತ್ತಿರದವರನ್ನು ಇನ್ನಷ್ಟು ಜಾಗರೂಕರನ್ನಾಗಿ ಮಾಡುವುದು ಅತ್ಯಂತ ಅಗತ್ಯ.

ಸಂತೋಷ್ ಕೆ., ಉಡುಪಿ

ಪ್ರಶ್ನೆ: ನಾನು ಖಾಸಗಿ ವಲಯದ ನೌಕರ. ಎನ್ಪಿಎಸ್ನಲ್ಲಿ ತಿಂಗಳಿಗೆ ₹3000 ಹೂಡಿಕೆ ಮಾಡುತ್ತಿದ್ದೇನೆ. ಅದರ ಮೊತ್ತ ಈಗ ಕೆಲವು ಲಕ್ಷಗಳಾಗಿರಬಹುದು. ನನ್ನ ನಿವೃತ್ತಿಗೆ ಇನ್ನೂ ಹದಿನೈದು ವರ್ಷ ಇದೆ. ನಿವೃತ್ತಿಯ ನಂತರ ಎನ್ಪಿಎಸ್ ಹಣವನ್ನು ಬಳಸಿ ಆ್ಯನ್ಯುಟಿ ಖರೀದಿಸಬೇಕು, ಆಗ ಮಾತ್ರವೇ ಪಿಂಚಣಿ ಸಿಗುತ್ತದೆ ಎಂದು ಓದಿದ್ದೇನೆ. ವಾಸ್ತವದಲ್ಲಿ ಎನ್ಪಿಎಸ್ ಯೋಜನೆಯು ಪಿಂಚಣಿಯನ್ನು ನೀಡುವುದಿಲ್ಲವೇ? ಆ್ಯನ್ಯುಟಿ ಖರೀದಿಸಿದರೆ ಮಾತ್ರವೇ ಪಿಂಚಣಿ ಸಿಗುತ್ತದೆಯೆ? ನನಗೆ ವಿವರ ಕೊಡಿ.

ಉತ್ತರ: ಎನ್ಪಿಎಸ್ ದೀರ್ಘಾವಧಿಯ ಉಳಿತಾಯ ಯೋಜನೆ, ಇದನ್ನು ನೇರವಾಗಿ ಪಿಂಚಣಿ ನೀಡುವ ಯೋಜನೆ ಎಂದು ಪರಿಗಣಿಸಲಾಗದು. ಈ ಯೋಜನೆಯ ಮೂಲ ಉದ್ದೇಶ ವ್ಯಕ್ತಿ ತನ್ನ ಉದ್ಯೋಗದ ಅವಧಿಯಲ್ಲಿ ಕ್ರಮಬದ್ಧವಾಗಿ ಉಳಿತಾಯ ಮಾಡಿ, ನಿವೃತ್ತಿಯ ವೇಳೆಗೆ ಸಾಕಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಬೇಕು ಎನ್ನುವುದು. ಆ ಮೊತ್ತವನ್ನು ನಿವೃತ್ತಿಯ ನಂತರ ಪಿಂಚಣಿಯಾಗಿ ಪರಿವರ್ತಿಸುವ ವ್ಯವಸ್ಥೆಯನ್ನು ಎನ್ಪಿಎಸ್ ಒದಗಿಸುತ್ತದೆ. ಎನ್ಪಿಎಸ್ ನಿಧಿ ನಿರ್ವಹಿಸುವ ಸಂಸ್ಥೆಗಳು, ಪಿಂಚಣಿಯನ್ನು ತಾವೇ ಪಾವತಿಸುವುದಿಲ್ಲ. ಪಿಂಚಣಿಗೆ ಆಧಾರವಾಗುವ ನಿಧಿಯನ್ನು ಹೊಂದಲು ನೆರವಾಗುತ್ತವೆ.

ನೀವು ತಿಂಗಳಿಗೆ ₹3,000ವನ್ನು ಎನ್ಪಿಎಸ್ನಲ್ಲಿ ಹೂಡಿಕೆ ಮಾಡುತ್ತಿದ್ದರೆ, ಆ ಹಣವನ್ನು ಎನ್ಪಿಎಸ್ ವ್ಯವಸ್ಥೆಯ ಅಡಿ ವಿವಿಧ ಆಸ್ತಿ ವರ್ಗಗಳಲ್ಲಿ ತೊಡಗಿಸಲಾಗುತ್ತದೆ. ಇದರಲ್ಲಿ ಈಕ್ವಿಟಿ, ಕಾರ್ಪೊರೇಟ್ ಬಾಂಡ್ಗಳು ಹಾಗೂ ಸರ್ಕಾರಿ ಬಾಂಡ್ಗಳು ಪ್ರಮುಖವಾಗಿವೆ.

ನೀವು 60 ವರ್ಷ ವಯಸ್ಸಿನಲ್ಲಿ ನಿವೃತ್ತಿಗೆ ಬಂದಾಗ, ಎನ್ಪಿಎಸ್ ಖಾತೆಯಲ್ಲಿರುವ ಒಟ್ಟು ಮೊತ್ತವನ್ನು ನಿರ್ದಿಷ್ಟ ನಿಯಮಗಳ ಪ್ರಕಾರ ಬಳಸಬೇಕು. ಪ್ರಸ್ತುತ ನಿಯಮಗಳಂತೆ, ಒಟ್ಟು ಮೊತ್ತದ ಗರಿಷ್ಠ ಶೇ 60ರವರೆಗೆ ನಿವೃತ್ತಿಯ ಸಮಯದಲ್ಲಿ ಒಟ್ಟಿಗೇ ಹಿಂಪಡೆಯಲು ಅವಕಾಶವಿದ್ದು, ಈ ಭಾಗ ಸಾಮಾನ್ಯವಾಗಿ ತೆರಿಗೆ ಮುಕ್ತವಾಗಿರುತ್ತದೆ. ಉಳಿದ ಶೇ 40ರಷ್ಟು ಮೊತ್ತವನ್ನು ಕಡ್ಡಾಯವಾಗಿ ಆ್ಯನ್ಯುಟಿ ಯೋಜನೆಗೆ ಬಳಸಬೇಕು.

ನೀವು ಆ್ಯನ್ಯುಟಿ ಯೋಜನೆಯನ್ನು ಪಿಎಫ್ಆರ್ಡಿಎ ಮಾನ್ಯತೆ ಪಡೆದ ಸಂಸ್ಥೆಗಳಿಂದ ಖರೀದಿಸಿದ ನಂತರವೇ ಪಿಂಚಣಿ ಆರಂಭವಾಗುತ್ತದೆ. ಆ್ಯನ್ಯುಟಿ ಎಂದರೆ, ನೀವು ಒಮ್ಮೆ ಹೂಡಿದ ಮೊತ್ತದ ಆಧಾರದಲ್ಲಿ (ಶೇ 40ರ ಮೊತ್ತ) ನಿಯಮಿತ ಪಿಂಚಣಿ ಆದಾಯ ಪಡೆಯುವ ವ್ಯವಸ್ಥೆ. ನಿಮಗೆ ಸಿಗುವ ಪಿಂಚಣಿಯ ಪ್ರಮಾಣವು ಆ್ಯನ್ಯುಟಿ ದರ, ನಿವೃತ್ತಿಯ ಸಮಯದ ವಯಸ್ಸು ಮತ್ತು ನೀವು ಆಯ್ಕೆ ಮಾಡುವ ಯೋಜನೆಯ ಸ್ವರೂಪದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ಎನ್ಪಿಎಸ್ ಅನ್ನು ನೇರ ಪಿಂಚಣಿ ಯೋಜನೆ ಎಂದು ನೋಡುವುದಕ್ಕಿಂತ, ನಿವೃತ್ತಿಯ ನಂತರ ಸ್ಥಿರ ಆದಾಯಕ್ಕೆ ದಾರಿ ಮಾಡಿಕೊಡುವ ಆರ್ಥಿಕ ಭದ್ರತಾ ವ್ಯವಸ್ಥೆ ಎಂದು ಅರ್ಥಮಾಡಿಕೊಳ್ಳುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.