ಷೇರುಪೇಟೆ ನೀರಸ ಆರಂಭ: ಬ್ಯಾಂಕಿಂಗ್, ಆದಾನಿ, ರಿಲಯನ್ಸ್‌ ಷೇರು ಮೌಲ್ಯ ಕುಸಿತ

7
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಭೀತಿ

ಷೇರುಪೇಟೆ ನೀರಸ ಆರಂಭ: ಬ್ಯಾಂಕಿಂಗ್, ಆದಾನಿ, ರಿಲಯನ್ಸ್‌ ಷೇರು ಮೌಲ್ಯ ಕುಸಿತ

Published:
Updated:

ಮುಂಬೈ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ದಿನವಾದ ಮಂಗಳವಾರ ಮುಂಬೈ ಷೇರುಪೇಟೆ 500 ಅಂಶಗಳ (ಶೇ 1.38) ಕುಸಿತ ಕಂಡಿದೆ. ಮುಂಬೈ ಪೇಟೆಯ ದಿನ ವಹಿವಾಟು 34,477 ಅಂಶಗಳೊಂದಿಗೆ ಆರಂಭವಾಯಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 116.70 ಅಂಶಗಳಷ್ಟು (ಶೇ 1.11) ಕುಸಿತ ಕಂಡಿದ್ದು 10,371 ಅಂಶಗಳೊಂದಿಗೆ ದಿನದ ವಹಿವಾಟು ಆರಂಭಿಸಿತು.

ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ, ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯ ಸಂಭವ ಗೋಚರಿಸುತ್ತಿರುವುದು ಹೂಡಿಕೆದಾರರಲ್ಲಿ ಚಿಂತೆಗೆ ಕಾರಣವಾಗಿದೆ. 418 ಕಂಪೆನಿಗಳ ಷೇರುಗಳು ಕುಸಿತ ಕಂಡಿದ್ದರೆ, 90 ಷೇರುಗಳ ಮೌಲ್ಯ ಸುಧಾರಿಸಿದೆ. 16 ಷೇರುಗಳ ಮೌಲ್ಯ ಬದಲಾಗಿಲ್ಲ.

ಬ್ಯಾಂಕಿಂಗ್, ಆಟೊಮೊಬೈಲ್, ಎನರ್ಜಿ, ದಿನಬಳಕೆ ವಸ್ತುಗಳು ಮತ್ತು ಲೋಹಗಳ ಕಂಪನಿಗಳ ಷೇರುಮೌಲ್ಯ ಕುಸಿದಿದೆ. ಇನ್‌ಫೋಸಿಸ್ ಮತ್ತು ಟೆಕ್ ಮಹೀಂದ್ರ ಕಂಪನಿಗಳು ಹೆಚ್ಚು ಲಾಭಗಳಿಸಿದ ಕಂಪನಿಗಳಾಗಿವೆ. ಇಂಡಸ್ ಇಂಡ್ ಬ್ಯಾಕ್, ಅದಾನಿ ಪೋರ್ಟ್ಸ್, ರಿಲಯನ್ಸ್ ಇಂಡಸ್ಟ್ರೀಸ್‌ಗಳ ಷೇರು ಮೌಲ್ಯ ಕುಸಿದಿದೆ.

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !